ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ ಮಾತನಾಡಿದರು. 
ಮಂಡ್ಯ

ನಾಳೆ, ನಾಡಿದ್ದು ಆರೋಗ್ಯ ತಪಾಸಣೆ ಶಿಬಿರ

ಪ್ರಮುಖ ಮುಖ್ಯಾಂಶಗಳು

  • ಆಶಯ್ ಜಿ.ಮಧು 33ನೇ ಹುಟ್ಟುಹಬ್ಬ ಅಂಗವಾಗಿ ಆಯೋಜನೆ
ಕೆ.ಎಂ.ದೊಡ್ಡಿ: ಭಾರತೀ ವಿದ್ಯಾಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್ ಜಿ.ಮಧು ಅವರ 33ನೇ ಹುಟ್ಟುಹಬ್ಬದ ಅಂಗವಾಗಿ ಮದ್ದೂರು ತಾಲೂನ ಚಂದೂಪುರ ಗ್ರಾಮದಲ್ಲಿ ಏ.21 ಮತ್ತು 22 ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ ತಿಳಿಸಿದರು.
ಭಾರತೀ ಎಜುಕೇಷನ್ ಟ್ರಸ್ಟ್, ಭಾರತೀ ಹೆಲ್ತ್ ಸೈನ್ಸ್ ಕಾಲೇಜುಗಳು, ಅಸ್ಟರ್ ಜಿ. ಮಾದೇಗೌಡ ಆಸ್ಪತ್ರೆ ಭಾರತಿನಗರ, ಆಶಯ್ ಅಭಿಮಾನಿ ಬಳಗ, ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಚಂದೂಪುರ ಸಂಯುಕ್ತಾಶ್ರಯದಲ್ಲಿ ನಡೆಯುವ ಶಿಬಿರದಲ್ಲಿ ಹಲವು ಆರೋಗ್ಯ ಸಂಬಂಧಪಟ್ಟ ಯೋಜನೆಗಳು ಲಭಿಸಲಿವೆ ಎಂದರು.
ಡಿ.ಕೆ.ಗೌಡ ಹೈಸ್ಕೂಲ್‌ನಲ್ಲಿ ಆಯೋಜಿಸಿರುವ ಶಿಬಿರವನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದು ಚಂದೂಪುರ ರೇಣುಕಾ ಆಶ್ರಮ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆೆಂದು ಚಂದೂಪುರದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಭಾರತೀ ವಿದ್ಯಾಸಂಸ್ಥೆಯ ಮುಖ್ಯ ನಿರ್ವಣಾಧಿಕಾರಿ ಆಶಯ್ ಜಿ.ಮಧು, ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆಯ ಯೂನಿಟ್ ಹೆಡ್ ಗಣೇಶ್ ಪ್ರಭು, ಭಾರತೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಂ. ನಂಜೇಗೌಡ, ಚಂದೂಪುರ ಡಿ.ಕೆ.ಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ, ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಅಭಿಯಂತರ ಹಾಗಲಹಳ್ಳಿ ಬಸವರಾಜೇಗೌಡ, ಪಿಡಿಒ ಮಂಚಮ್ಮ ಭಾಗವಹಿಸಲಿದ್ದಾರೆ ಎಂದರು.
ಅನುಭವ ಹೊಂದಿದ ವೈದ್ಯರ ತಂಡಗಳು ರಕ್ತದ ಒತ್ತಡ ಪರಿಶೀಲನೆ, ಮಧುಮೇಹ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಲಹೆ, ಕ್ಯಾನ್ಸರ್ ಪತ್ತೆ ಹಚ್ಚುವಿಕೆ, ಕೀಲು ಮತ್ತು ಮೂಳೆ ತಜ್ಞ ವೈದ್ಯರಿಂದ ತಪಾಸಣೆ, ಜನರಲ್ ಸರ್ಜರಿ ತಜ್ಞರಿಂದ ತಪಾಸಣೆ, ದಂತ, ಮೂತ್ರ ವಿಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಫೀಸಿಯೋಥೆರಪಿ, ಸಾಮಾನ್ಯ ವೈದ್ಯಕೀಯ ತಜ್ಞ ವೈದ್ಯರಿಂದ ತಪಾಸಣೆ, ನವಜಾತ ಶಿಶು ಮತ್ತು ಮಕ್ಕಳ ಆರೋಗ್ಯ, ಶಸ್ತ್ರಚಿಕಿತ್ಸೆ ತಜ್ಞರಿಂದ ತಪಾಸಣೆ, ಕಣ್ಣಿನ ತಜ್ಞ ವೈದ್ಯರಿಂದ ತಪಾಸಣೆ ನಡೆಯಲಿದೆ ಎಂದು ತಿಳಿಸಿದರು.
ವೈದ್ಯರ ತಪಾಸಣೆ ಜತೆಗೆ ಅವಶ್ಯಕ ಔಷಧಗಳನ್ನು ಉಚಿತ ವಿತರಣೆ ಹಾಗೂ ಅವಶ್ಯಕವಿದ್ದಲ್ಲಿ ನೇತ್ರ ಸರ್ಜರಿ ಜತೆಗೆ ಕನ್ನಡಕ ನೀಡಲಾಗುವುದು. ಶಿಬಿರದ ಉಪಯೋಗವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖಂಡರಾದ ಗ್ರಾ.ಪಂ. ಮಾಜಿ ಸದಸ್ಯ ಎಚ್. ಹೊಸಹಳ್ಳಿ ಮಲ್ಲೇಶ್, ಎಲ್. ಐ ಸಿ.ಕೆಂಪೇಗೌಡ, ಚಂದೂಪುರ ಪುನೀತ್, ಪುಟ್ಟಮಾದೇಗೌಡ ,ಅಪ್ಪಾಜಿಗೌಡ, ಪ್ರಭಾಕರ್, ಅನಿಲ್ ಕುಮಾರ್, ಎಸ್.ಐ ಹೊನ್ನಲಗೆರೆ ಮರಿಸ್ವಾಮಿ ಸೇರಿದಂತೆ ಮತ್ತಿತರಿದ್ದರು.