ಕಿಕ್ಕೇರಮ್ಮನವರ ಮೂಲವಿಗ್ರಹ. 
ಮಂಡ್ಯ

ಇಂದು ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಕಿಕ್ಕೇರಿ-ಲಕ್ಷ್ಮೀಪುರ ಗ್ರಾಮದೇವತೆ
  • ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವ
ಕಿಕ್ಕೇರಿ: ಜಿಲ್ಲೆಯ ಅವಳಿ ಗ್ರಾಮಗಳಾದ ಕಿಕ್ಕೇರಿ-ಲಕ್ಷ್ಮೀಪುರ ಗ್ರಾಮದೇವತೆ ಕಿಕ್ಕೇರಮ್ಮನವರ ಬ್ರಹ್ಮ ರಥೋತ್ಸವ ಮಾ.25ರ ಸಂಜೆ 5ಕ್ಕೆ ವಿಜೃಂಭಣೆಯಿಂದ ನೆರವೇರಲಿದೆ.
ಕಿಕ್ಕೇರಿಗೆ ಕಿಕ್ಕೇರಮ್ಮಳಾಗಿ, ಲಕ್ಷ್ಮೀಪುರ ಗ್ರಾಮಕ್ಕೆ ಲಕ್ಷ್ಮೀದೇವಿಯಾಗಿ, ಭಕ್ತರಿಗೆ ಮಹಾಲಕ್ಷ್ಮೀಯಾಗಿದ್ದಾಳೆ. ಲಕ್ಷ್ಮೀಪುರದ ಹಾಲುಮತಸ್ಥ ಸಮುದಾಯದ ಲಕ್ಕಮ್ಮನ ವಂಶಸ್ಥರಾದ ಬೂನಾಸಿ, ದೊಡ್ಡಹಟ್ಟಿ, ಕೆಂಚಮ್ಮ, ಮಾರಮ್ಮ ವಠಾರದವರು ದೇವಿ ಅರ್ಚಕರಾಗಿದ್ದು, ವರ್ಷದ ಯುಗಾದಿಯ ಪಂಚಮಿ ಒಂದು ದಿನ ಮಾತ್ರ ವಿಪ್ರ ಸಮಾಜದವರು ಪೂಜಿಸುತ್ತಾರೆ.
ದೇವಿಯಲ್ಲಿ ಹೂವು ಕೇಳುವುದು, ಮುಡಿಪು ಎತ್ತಿದ ಮಹಾಪ್ರಸಾದ, ವೀಳ್ಯದೆಲೆ ಅಲಂಕಾರ ಪೂಜೆ ಜಾತ್ರೆಯ ವಿಶೇಷ. ಜಾತ್ರೆ ದಿನದಂದು ಲಕ್ಷ್ಮೀಪುರ ಗ್ರಾಮಸ್ಥರಿಂದ ನಾಟಕೋತ್ಸವ, ತದನಂತರ ಹೂವಿನ ಪಲ್ಲಕ್ಕಿ, ವಸಂತನ ಹಬ್ಬ, ಓಕುಳಿ ಹಬ್ಬದ ಬಳಿಕ ತೆಪ್ಪೋತ್ಸವ ವಿಶೇಷವಾಗಿದೆ.