ಕ್ಯಾತನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ.ಮಹೇಶ್ ಅವರನ್ನು ನಿರ್ದೇಶಕರು ಅಭಿನಂದಿಸಿದರು. ಪುಟ್ಟೇಗೌಡ, ನಾರಾಯಣ, ಕೆ.ಎಂ.ಜಗದೀಶ್, ಶಿವಲಿಂಗಯ್ಯ, ಆರ್.ಎಲ್.ರವಿಶಂಕರ್, ನಾಗೇಶ್, ಚಂದ್ರಶೇಖರ್, ಉಮೇಶ್, ಮರಿಸ್ವಾಮಿ, ಲಕ್ಷ್ಮೀ, ಸುಜಾತಾ ಇದ್ದರು.
ಮಳವಳ್ಳಿ: ತಾಲೂಕಿನ ಕ್ಯಾತನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಗಳವಾರ ತೆಂಕಹಳ್ಳಿ ಟಿ.ಎಂ.ಮಹೇಶ್ ಅವಿರೋಧವಾಗಿ ಆಯ್ಕೆಯಾದರು.
ಕೆ.ಎಂ.ಜಗದೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಮಹೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಪುಟ್ಟೇಗೌಡ ಕಾರ್ಯ ನಿರ್ವಹಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ.ಎಂ.ಅಧ್ಯಕ್ಷ, ಉಪಾಧ್ಯಕ್ಷ ನಾರಾಯಣ, ನಿರ್ದೇಶಕರಾದ ಶಿವಲಿಂಗಯ್ಯ, ಆರ್.ಎಲ್.ರವಿಶಂಕರ್, ನಾಗೇಶ್, ಚಂದ್ರಶೇಖರ್, ಉಮೇಶ್, ಮರಿಸ್ವಾಮಿ, ಲಕ್ಷ್ಮೀ, ಸುಜಾತಾ ಇದ್ದರು.