ಮಂಡ್ಯ ನಗರದ ಪೇಟೆಬೀದಿ ಶ್ರೀಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಶ್ರೀ ತ್ಯಾಗರಾಜರ ಆರಾಧನೆಯಲ್ಲಿ ಗಾಯನ ನಡೆಸಿಕೊಟ್ಟ ವಿದ್ವಾನ್ ಬಳ್ಳಾರಿ ರಾಘವೇಂದ್ರ ಹಾಗೂ ಕು.ಲಕ್ಷ್ಮೀ ಹಾಗೂ ಪಕ್ಕವಾದ್ಯ ಕಲಾವಿದರನ್ನು ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.
- ತ್ಯಾಗರಾಜರ ಆರಾಧನೆ
- ವಿದ್ವಾನ್ ಬಳ್ಳಾರಿ ರಾಘವೇಂದ್ರ ಹಾಗೂ ಕು.ಲಕ್ಷ್ಮೀ ಅವರ ಗಾಯನ
- ಮಹಾಲಕ್ಷ್ಮೀದೇವಿ ದೇವಸ್ಥಾನದಲ್ಲಿ ಆಯೋಜನೆ
ಮಂಡ್ಯ: ನಗರದ ಪೇಟೆ ಬೀದಿಯ ಶ್ರೀನಿವಾಸಸ್ವಾಮಿ ದೇವಸ್ಥಾನ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮೀದೇವಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಶ್ರೀ ತ್ಯಾಗರಾಜರ ಆರಾಧನೆ ಅಂಗವಾಗಿ ವಿದ್ವಾನ್ ಬಳ್ಳಾರಿ ರಾಘವೇಂದ್ರ ಹಾಗೂ ಕು.ಲಕ್ಷ್ಮೀ ಅವರ ಗಾಯನ ನಡೆಯಿತು.
ಮೃದಂಗದಲ್ಲಿ ವಕೀಲ ಸುದರ್ಶನ್, ವಯೋಲಿನ್‌ನಲ್ಲಿ ಗುರುಮೂರ್ತಿ, ತಬಲಾದಲ್ಲಿ ಗಣೇಶ್ ಸಾಥ್ ನೀಡಿದರು. ಬೆಳಗ್ಗೆ ಎಂ.ವೈ. ಕುಮಾರ್ ಮತ್ತು ಎಂ.ಎನ್.ಯೋಗೇಶ್ ತಂಡದವರಿಂದ ಸ್ಯಾಕ್ಸೋಫೋನ್ ವಾದನ ಸಂಗೀತ ಪ್ರೀಯರ ಮನ ಸೆಳೆಯಿತು. ಬಳಿಕ ಗಾಯಕರು ಹಾಗೂ ವಾದ್ಯಗೋಷ್ಠಿ ಕಲಾವಿದರನ್ನು ಅಭಿನಂದಿಸಲಾಯಿತು.
ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ರಾಜೇಂದ್ರ, ನರಸಿಂಹಮೂರ್ತಿ, ನಾರಾಯಣ್, ಎಂ.ಎಸ್.ರಾಜಣ್ಣ, ಬಾಲಕೃಷ್ಣ, ಎಂ.ಎನ್.ಯೋಗೇಶ್, ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.