ಅಗಸರಹಳ್ಳಿ ಬಳಿಯಿರುವ ಈಗಲ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಪುಂಡರು ಬೆಂಕಿಯಿಡುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿರುವುದು.
- ಅಗಸರಹಳ್ಳಿ ಬಳಿಯಿರುವ ಈಗಲ್ ಬಾರ್ ಆ್ಯಂಡ್ ರೆಸ್ಟೋರೆಂಟ್
- ಪುಂಡರು ಬೆಂಕಿ
ಕೆ.ಆರ್.ಪೇಟೆ: ತಾಲೂಕಿನ ಅಗಸರಹಳ್ಳಿ ಬಳಿಯಿರುವ ಈಗಲ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಪುಂಡರು ಬೆಂಕಿ ಹಚ್ಚಿದ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟು ಮೂವರು ಪುಂಡರ ಅಟ್ಟಹಾಸ ಬಾರ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮುರುಕನಹಳ್ಳಿ ಗ್ರಾಮದ ರಕ್ಷಿತ್, ಸಚಿನ್ ಮತ್ತು ಸುನಿಲ್ ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ರೆಸ್ಟೋರೆಂಟ್‌ಗೆ ಬಂದ ಪುಂಡರು ಮದ್ಯವನ್ನು ಉಚಿತವಾಗಿ ನೀಡುವಂತೆ ಕೇಳಿದ್ದಾರೆ. ಈ ಸಂದರ್ಭ ಕ್ಯಾಷಿಯರ್ ನಲ್ಲಿದ್ದ ರಕ್ಷಿತ್ ಈ ವಿಚಾರವನ್ನು ಮಾಲೀಕ ಮರಡಹಳ್ಳಿ ಪರಮೇಶ ಅವರಿಗೆ ದೂರವಾಣಿಯಲ್ಲಿ ತಿಳಿಸಿದಾಗ, ಇದೊಂದು ಬಾರಿ ಮಾತ್ರ ಕೊಡು ಎಂದಾಗ ಬಾಟಲಿಯನ್ನು ರಕ್ಷಿತ್ ಮತ್ತು ಸಹಚರರು ತೆಗೆದುಕೊಂಡು ಹೋಗಿದ್ದಾರೆ.
ಅರ್ಧಗಂಟೆ ಬಿಟ್ಟು ಮತ್ತೆ ಬಂದ ರಕ್ಷಿತ್ ಮತ್ತು ಸಹಚರರು ಮತ್ತೊಂದು ಬಾಟಲಿ ಕೊಡುವಂತೆ ಡಿಮಾಂಡ್ ಮಾಡಿದಾಗ ಮಾಲೀಕರು ನಿರಾಕರಿಸಿ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ಪುಂಡರು ಬಾರ್‌ನ ಕ್ಯಾಶ್ ಕೌಂಟರ್ ಹಾಗೂ ಮಾಲೀಕರ ಕಾರಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.