ಮೇಲುಕೋಟೆ: ಹೋಬಳಿಯ ನಾರಣಾಪುರ ಗ್ರಾಮದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದವನಿಗೆ ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 
ಮಂಡ್ಯ

ಮನೆಗೆ ನುಗ್ಗಿ ದರೋಡೆ ಮೂರು ವರ್ಷ ಜೈಲು ಶಿಕ್ಷೆ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • robbery
ಮೇಲುಕೋಟೆ: ಹೋಬಳಿಯ ನಾರಣಾಪುರ ಗ್ರಾಮದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದವನಿಗೆ ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕೆ.ಆರ್.ಪೇಟೆ ತಾಲೂಕಿನ ದೊಡ್ಡ ಹಾರನಹಳ್ಳಿ ಗ್ರಾಮದ ದಿವಂಗತ ರಾಮಚಂದ್ರೇಗೌಡರ ಮಗ ಅಶ್ವಥ್ ಉರುಫ್ ಅಶೋಕ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. ಈತ 2013ರಲ್ಲಿ ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಾರಣಾಪುರ ಗ್ರಾಮದ ಟಿ. ವೆಂಕಟೇಗೌಡ ಎಂಬುವರ ಮನೆಗೆ ನುಗ್ಗಿ ಬೀರು ಒಡೆದು ಚಿನ್ನದ ಮಾಂಗಲ್ಯ ಸರ, ಚೈನು, ಓಲೆಗಳು, ನೆಕ್ಲೇಸ್ ಸೇರಿದಂತೆ ಹಲವು ಒಡವೆಗಳನ್ನು ಕದ್ದು ಪರಾರಿಯಾಗಿದ್ದನು. ಮನೆಯ ಯಜಮಾನ ನೀಡಿದ ದೂರಿನನ್ವಯ ತಕ್ಷಣ ಕಾರ್ಯಪ್ರವೃತ್ತವಾಗಿದ್ದ ಮೇಲುಕೋಟೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಆರೋಪಿ ಅಶ್ವಥ್‌ನನ್ನು ಪತ್ತೆ ಮಾಡಿ ಕದ್ದಿದ್ದ ಮಾಲುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಾಬು ಮೇಲುಕೋಟೆ ಪೊಲೀಸರು ಸಲ್ಲಿಸಿದ ಸಾಕ್ಷಾೃಧಾರಗಳನ್ನು ಪರಿಗಣಿಸಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಪ್ರಕರಣದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸುಧಾರಾಣಿ ವಾದ ಮಂಡಿಸಿದ್ದರು. ತನಿಖಾಧಿಕಾರಿಯಾಗಿ ಮೇಲುಕೋಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಪಿ ಪ್ರಕಾಶ್ ಕರ್ತವ್ಯನಿರ್ವಹಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಿಬ್ಬಂದಿ ಆನಂದನಾಯ್ಕ, ನಾರಾಯಣಗೌಡ, ಅಭಿಷೇಕ್ ತನಿಖೆಗೆ ಸಹಕರಿಸಿದ್ದರು.