ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ಶಾಸಕ ಕೆ.ಎಂ ಉದಯ ಅಧ್ಯಕ್ಷತೆಯಲ್ಲಿ ಬಿಎಲ್‌ಒಗಳ ಸಭೆ ಜರುಗಿತು. ನಂಜುಂಡಸ್ವಾಮಿ, ಆರ್.ವಿ.ವೆಂಕಟೇಶ್, ಸಿ.ಡಿ.ಗಂಗಾಧರ್, ಸುರೇಶ್‌ಕಂಠಿ ಸೇರಿದಂತೆ ಇತರರು ಇದ್ದರು. 
ಮಂಡ್ಯ

ಮತದಾರರ ಪಟ್ಟಿ ತಯಾರಿಕೆಯಲ್ಲಿ ಲೋಪವಾಗದಿರಲಿ

ಮದ್ದೂರು: ಅಂತಿಮ ಮತದಾರರ ಪಟ್ಟಿ ತಯಾರಿ ಹಂತದಲ್ಲಿ ಬಿಎಲ್‌ಒಗಳ ಸಹಕಾರ ಅತ್ಯಗತವಾಗಿದ್ದು, ಯಾವುದೇ ಲೋಪದೋಷಗಳು ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಕದಲೂರು ಗ್ರಾಮದ ಪಟ್ಟಲದಮ್ಮ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಬಿಎಲ್‌ಒಗಳ ಸಭೆಯಲ್ಲಿ ಮಾತನಾಡಿದ ಅವರು, ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು, ಮಹಿಳೆಯರು ಮತ್ತು ಬಿಜೆಪಿ ವಿರುದ್ಧ ಧ್ವನಿ ಎತ್ತುವವರನ್ನು ಡಿಲಿಟ್ ಮಾಡಲು ಬಿಜೆಪಿ ಪಕ್ಷ ಮುಂದಾಗಿದೆ. ಈ ಸಂಬಂಧ ನೆರೆಯ ಹಲವು ರಾಜ್ಯಗಳಲ್ಲಿ ಮತದಾರರು ಡಿಲಿಟ್ ಆದ ಕಾರಣ ಬಿಜೆಪಿ ಸರ್ಕಾರ ರಚಿಸಲು ಕಾರಣವಾಯಿತು ಎಂದು ದೂರಿದರು.
ಬಿಎಲ್‌ಒಗಳು ಮತದಾರರ ಮನೆ ಮನೆಗೆ ಭೇಟಿನೀಡಿ ಯಾವುದೇ ಮತಗಳು ಕರಡು ಪಟ್ಟಿಯಿಂದ ಡಿಲಿಟ್ ಆಗದಂತೆ ಎಚ್ಚರಿಕೆ ವಹಿಸುವ ಮೂಲಕ ಬಿಜೆಪಿಗೆ ತಿರುಗು ಬಾಣವಾಗಿ ಮಾಡಬೇಕು. ಕಾಂಗ್ರೆಸ್ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದು, ಹೀಗಾಗಿ ಎಸ್‌ಐಆರ್ ಹಿಮ್ಮೆಟ್ಟಿಸಿ ಪ್ರಜಾತಂತ್ರ ರಕ್ಷಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗಿದ್ದು ರಾಜ್ಯಾದಂತ ಪಕ್ಷವು ಹೋರಾಟ ರೂಪಿಸಲಿದೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಪ್ರಜಾಪ್ರಭುತ್ವದ ಉಳುವಿಗೆ ಮುಂದಾಗಬೇಕು. 2028ರ ಚುನಾವಣೆಯಲ್ಲಿ ಪಕ್ಷವು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಲು ಈಗಿನಿಂದಲೇ ಶಕ್ತಿ ಮೀರಿ ಶ್ರಮಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕರಾದ ನಂಜುಂಡಸ್ವಾಮಿ, ಆರ್.ವಿ.ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ಪಿ.ರಾಜಿವ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್.ಮೋಹನ್ ಕುಮಾರ್, ಅಜ್ಜಹಳ್ಳಿ ರಾಮಕೃಷ್ಣ, ಮಮತಾ ಶಂಕರೇಗೌಡ, ಶರತ್, ಕುಶಾಲ್‌ಗೌಡ, ದೊರೆಸ್ವಾಮಿ, ಅಪ್ಪಾಜಿಗೌಡ, ಇತರರಿದ್ದರು.