ಮದ್ದೂರಿನ ವಿಶ್ವೇಶ್ವರಯ್ಯ ನಗರದ 7ನೇ ಕ್ರಾಸ್‌ನ ಮನೆಯೊಂದರಲ್ಲಿ ಕಳ್ಳತನವಾಗಿರುವುದು.  
ಮಂಡ್ಯ

ನಗದು, ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಕಳ್ಳತನ

ಪ್ರಮುಖ ಮುಖ್ಯಾಂಶಗಳು

  • ವಿಶ್ವೇಶ್ವರಯ್ಯ ನಗರ 7ನೇ ಕ್ರಾಸ್‌
  • ಮನೆಯೊಂದರಲ್ಲಿ ಕಳ್ಳತನ
ಮದ್ದೂರು: ಪಟ್ಟಣದ ವಿಶ್ವೇಶ್ವರಯ್ಯ ನಗರ 7ನೇ ಕ್ರಾಸ್‌ನ ಮನೆಯೊಂದರಲ್ಲಿ ಕಳ್ಳತನವಾಗಿದ್ದು, 1.5 ಲಕ್ಷ ರೂ.ನಗದು ಸೇರಿದಂತೆ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳನ್ನು ಮಂಗಳವಾರ ರಾತ್ರಿ ಕಳ್ಳರು ದೋಚಿದ್ದಾರೆ.
ಸೌಮ್ಯ ಮಹೇಶ್ ಅವರ ಮನೆಯಲ್ಲೇ ಕಳ್ಳತನವಾಗಿದ್ದು, ಮನೆಯವರು ಸೋಮವಾರ ಸಂಬಂಧಿಕರ ಊರಿಗೆ ಹೋಗಿ ಮಂಗಳವಾರ ರಾತ್ರಿ 10ಗಂಟೆಗೆ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ.
ಕಳ್ಳರು ಮನೆಯ ಗೇಟ್‌ನ ಬೀಗ ಹೊಡೆದು ನಂತರ ಮುಂಬಾಗಿಲಿನ ಲಾಕನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಒಳಹೋಗಿದ್ದು, ರೂಂನ ಬೀರುವಿನಲ್ಲಿದ್ದ ಚಿನ್ನಾಭರಣ, 1.5ಲಕ್ಷ ರೂ.ನಗದು ಹಾಗೂ ದೇವರಮನೆಯಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಸಿ.ಪಿ.ಐಗಳಾದ ನವೀನ್ ಕುಮಾರ್, ನಾರಾಯಣ್ , ಪಿ ಎಸ್‌ಐಗಳಾದ ಮಂಜುನಾಥ್, ರವಿ ಸೇರಿದಂತೆ ಸಿಬ್ಬಂದಿ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಮನೆಯ ಮಾಲೀಕರಾದ ಸೌಮ್ಯಾ ಮಹೇಶ್ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.