ಮಂಡ್ಯ ನಗರದ ವಿ.ವಿ ರಸ್ತೆಯಲ್ಲಿನ ಫೋಟೋ ಲ್ಯಾಬ್‌ನಲ್ಲಿ ಕಳ್ಳತನ ನಡೆದಿರುವುದು.
- ಸರಣಿ ಕಳ್ಳತನಕ್ಕೆ ಯತ್ನ
- ಫೋಟೋ ಲ್ಯಾಬ್‌ನಲ್ಲಿ 1.75 ಲಕ್ಷ ರೂ. ಕಳವು
ಮಂಡ್ಯ: ನಗರದ ವಿ.ವಿ.ರಸ್ತೆಯಲ್ಲಿ ಮೂರು ಮಳಿಗೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಈ ಪೈಕಿ ಕಾವೇರಿ ಫೋಟೋ ಲ್ಯಾಬ್‌ನಲ್ಲಿ 1.75 ಲಕ್ಷ ರೂ. ಕಳವು ಮಾಡಲಾಗಿದೆ.
ಸಂದೀಪ್ ಎಂಬುವವರಿಗೆ ಸೇರಿದ ಲ್ಯಾಬ್‌ನ ಕ್ಯಾಷ್ ಕೌಂಟರ್‌ನಲ್ಲಿ ಇಟ್ಟಿದ್ದ ನಗದು ಕಳವು ಮಾಡಲಾಗಿದೆ. ಇದೇ ಮಳಿಗೆಯಲ್ಲಿ ಕೆಳ ಅಂತಸ್ತಿನಲ್ಲಿರುವ ರೋಲಿಂಗ್ ಶೆಟರ್ ಮೀಟಿ ಮೊದಲ ಅಂತಸ್ತಿಗೆ ತೆರಳಿರುವ ಕಳ್ಳರು ಅಲ್ಲಿದ್ದ ಲ್ಯಾಬ್‌ಗೆ ಕನ್ನ ಹಾಕಿದ್ದಾರೆ. ಎರಡನೇ ಶನಿವಾರದ ಹಿನ್ನೆಲೆಯಲ್ಲಿ ಬ್ಯಾಂಕ್ ರಜೆ ಇದ್ದ ಕಾರಣ ನಗದನ್ನು ಬ್ಯಾಂಕ್‌ಗೆ ಪಾವತಿಸಲಾಗದೆ ಲ್ಯಾಬ್‌ನಲ್ಲೇ ಇಡಲಾಗಿತ್ತು.
ಲ್ಯಾಬ್ ಪಕ್ಕದ್ದಲ್ಲಿನ ಬ್ಯೂಟಿ ಪಾರ್ಲರ್‌ನ ರೋಲಿಂಗ್ ಶೆಟರ್ ಮುರಿದು ಒಳಗೆ ನುಗ್ಗಿರುವ ಕಳ್ಳರಿಗೆ ಅಲ್ಲಿ ಹಣ ಅಥವಾ ಬೆಲೆ ಬಾಳುವ ವಸ್ತು ಸಿಕ್ಕಿಲ್ಲ. ಇದರ ಪಕ್ಕದಲ್ಲಿನ ಡೆಂಟಲ್ ಕ್ಲಿನಿಕ್ ರೋಲಿಂಗ್ ಶೆಟರ್ ಮುರಿಯುವ ಪ್ರಯತ್ನವನ್ನು ದುಷ್ಕರ್ಮಿಗಳು ಮಾಡಿದ್ದು, ಲಾಕ್ ಓಪನ್ ಆಗದ ಪರಿಣಾಮ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕಳ್ಳತನಕ್ಕೆ ಸಂಬಂಧಿಸಿದ ಕೆಲ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಮಂಡ್ಯ ಪೂರ್ವ ಠಾಣೆ ಪೋಲೀಸರು ಪ್ರಕರಣ ದಾಖಲಾಗಿದೆ.