ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಟಿ. ಮಂಜು ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು. ಕೃಷ್ಣಯ್ಯ, ಮಂಜೇಗೌಡ, ಶೇಖರ್ ಇತರರಿದ್ದರು.  
ಮಂಡ್ಯ

ಅನುದಾನಕ್ಕೆ ಗೋಗರೆಯುವ ಸ್ಥಿತಿ

ಕಿಕ್ಕೇರಿ: ತಾಲೂಕಿನ ಅಭಿವೃದ್ಧಿಗಾಗಿ ದೊಡ್ಡ ಕನಸಿದ್ದು, ಕಾಂಗ್ರೆಸ್ ಸರ್ಕಾರ ಅನುದಾನ ಕೊಡಲು ಸತಾಯಿಸುತ್ತಿದೆ ಗೋಗರೆಯುವ ಸ್ಥಿತಿಯಾಗಿದೆ ಎಂದು ಶಾಸಕ ಎಚ್.ಟಿ.ಮಂಜು ಆರೋಪಿಸಿದರು.
ಹೋಬಳಿಯ ಗಂಗೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ 50 ಲಕ್ಷ ರೂ. ವೆಚ್ಚದ ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಡಿದರು.
ಅನುದಾನ ನೀಡಲು ಸರ್ಕಾರದಿಂದ ಮೀನಾ ಮೇಷ ಎಣಿಸುತ್ತಿದೆ. 2028ಕ್ಕೆ ಜೆಡಿಎಸ್-ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಮತ್ತೊಮ್ಮೆ ತನ್ನನ್ನು ಶಾಸಕರಾಗಿ ಮಾಡಿದರೆ ತಾಲೂಕಿನ ಜನರ ಋಣ ತೀರಿಸಲು 2 ಸಾವಿರ ಕೋಟಿ ರೂ. ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಲಾಗುವುದು ಎಂದರು.
ಈ ಗ್ರಾಮ ಅನುಸೂಚಿತ ಸಮುದಾಯದವರು ಇರುವ ಗ್ರಾಮವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನರಾಂ ಅವರನ್ನು ದೇವರಂತೆ ಪೂಜಿಸುತ್ತಾರೆ. ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದ ಈ ಮಹಾನೀಯರನ್ನು ಮರೆಯಲಾಗದು. ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಬದ್ಧನಿರುವೆ. ವಿಶ್ವಜ್ಞಾನಿಯ ದೇವರೆಂದು ನಂಬಿರುವ ಗ್ರಾಮದಲ್ಲಿ ಆಗಬೇಕಿರುವ ಸೌಲಭ್ಯ ಒದಗಿಸಲು ಯತ್ನಿಸುವೆ ಎಂದು ನುಡಿದರು.
ಗ್ರಾಮಸ್ಥರು ಗುಣಮಟ್ಟದ ಕಾಮಗಾರಿಗೆ ಕಾಳಜಿ, ಉಸ್ತುವಾರಿ ವಹಿಸಿ. ದಿನದ 24ಗಂಟೆಗಳ ಕಾಲ ಸಿಗುವ ತಾಲೂಕಿನ ಏಕೈಕ ಶಾಸಕನಾಗಿರುವೆ. ಅಂಜಿಕೆ ಬಿಟ್ಟು ತಮ್ಮ ಸಮಸ್ಯೆಗಳನ್ನು ತಿಳಿಸಿ, ಸಲಹೆ ನೀಡಿ ಸ್ವೀಕರಿಸುವೆ ಎಂದು ಮನವಿ ಮಾಡಿದರು.
ಮುಖಂಡರಾದ ಗಂಗೇನಹಳ್ಳಿ ಕೃಷ್ಣಯ್ಯ, ಸಂಜಯ್, ರಾಮು, ಮಧು, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಮೆಣಸ ಮಹಾದೇವೇಗೌಡ, ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿ ಮಂಜೇಗೌಡ, ಕೆ.ಜಿ.ಪುಟ್ಟರಾಜು, ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶೇಖರ್, ಕೆಆರ್‌ಐಡಿಎಲ್ ಇಂಜಿನಿಯರ್ ಚೇತನ್ ಇದ್ದರು.