ಶ್ರೀರಂಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀರಂಗನಾಯಕಿ ಸಮಾಜ ಮತ್ತು ಐಕ್ಯ ಅಲಯನ್ಸ್ ಸಂಸ್ಥೆ ವತಿಯಿಂದ ವೈದ್ಯರು ಮತ್ತು ಸಿಬ್ಬಂದಿ ಅಭಿನಂದಿಸಲಾಯಿತು. ಕೆ.ಎಸ್.ಜಯಶಂಕರ್, ಯೋಗ ಶಿಕ್ಷಕ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಪಾಲಹಳ್ಳಿ ಭಾರತಿ, ಕಡತನಾಳು ಕೃಷ್ಣಕುಮಾರ್, ಗೋಪಾಲ್ ಇದ್ದರು. 
ಮಂಡ್ಯ

ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸೇವೆ ಶ್ಲಾಘನೀಯ

ಶ್ರೀರಂಗಪಟ್ಟಣ: ರೋಗಿಗಳಿಗೆ ಉತ್ತಮ ಆರೋಗ್ಯಸೇವೆ ಸಿಗುವುದು ಕೇವರ ವೈದ್ಯರ ಕರ್ತವ್ಯದಿಂದ ಮಾತ್ರವಲ್ಲ, ಸಿಬ್ಬಂದಿಯ ಆರೈಕೆಯಿಂದಲೂ ಸಾಧ್ಯವಾಗಲಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಇದಕ್ಕೊಂದು ಮಾದರಿಯಾಗಿದ್ದಾರೆ ಎಂದು ಶ್ರೀರಂಗನಾಯಕಿ ಸಮಾಜ ಹಾಗೂ ಲೆನಿನ್ ಸಂಸ್ಥೆ ಸಂಸ್ಥಾಪಕಿ ಬಿ.ಎಸ್.ವಿಶಾಲಾಕ್ಷಿ ಪದ್ಮನಾಬ್ ತಿಳಿಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಶ್ರೀರಂಗನಾಯಕಿ ಸಮಾಜ ಮತ್ತು ಐಕ್ಯ ಅಲಯನ್ಸ್ ಸಂಸ್ಥೆ ವತಿಯಿಂದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ತೆರಳಿದ ಅವರು, ವೈದ್ಯರು ಮತ್ತು ಸಿಬ್ಬಂದಿಗೆ ಹೂ ನೀಡಿ ಗೌರವಿಸಿ ಮಾತನಾಡಿದ ಅವರು, ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವುದರ ಜತೆಗೆ ಆಸ್ಪತ್ರೆಯ ಸ್ವಚ್ಛತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುರುವುದಕ್ಕಾಗಿ ಸ್ಥಳೀಯರಾದ ನಮಗೆ ತುಂಬಾ ಹೆಮ್ಮೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐಕ್ಯ ಅಲೆಯನ್ ಸಂಸ್ಥೆಯ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮಾತನಾಡಿ, ರಕ್ತದಾನ ಎಂದರೆ ಜೀವದಾನ. ಹೀಗಾಗಿ ಪ್ರತಿ ವರ್ಷ ರಕ್ತದಾನ ಶಿಬಿರ ಆಯೋಜಿಸಿ ಜನರ ಜೀವ ಉಳಿಸುವ ಸಂಕಲ್ಪ ಮಾಡಿ ಅಗತ್ಯವಿರುವ ರೋಗಿಗಳಿಗೆ ಜೀವ ಉಳಿಸಲು ಮುಂದಾಗಲಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಸಾತ್ವಾನ ಕೇಂದ್ರದ ವ್ಯವಸ್ಥಾಪಕಿ ಶೀಲಾ ನಂಜುಂಡಯ್ಯ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಸವಿತಾ, ವೈದ್ಯರಾದ ಡಾ.ಶಾಸ್ತ್ರೀ, ಡಾ.ಚಂದ್ರಿಕಾ, ಹಿರಿಯ ಶುಶ್ರೂಷಕಿಯಾರಾದ ಶಿಲ್ಪಾ, ಕವಿತಾ, ನಂಜಮ್ಮಣಿ, ಜೂಲಿ, ಕುಸುಮಾ, ಶುಶ್ರೂಷಕ ಮುರಳಿ, ನಿವೃತ್ತ ಶಿಕ್ಷಣ ಜಂಟಿ ನಿರ್ದೇಶಕಿ ಸುವರ್ಣದೇವಿ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಜಯಶಂಕರ್, ಯೋಗ ಶಿಕ್ಷಕ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಪಾಲಹಳ್ಳಿ ಭಾರತಿ, ಕಡತನಾಳು ಕೃಷ್ಣಕುಮಾರ್, ಗೋಪಾಲ್ ಇದ್ದರು.