ಕೊನ್ನಾಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಿಎಸ್‌ಐ ಲೋಕೇಶ್, ಎನ್.ಆರ್. ಸಿದ್ದರಾಜು, ಶಿವಲಿಂಗೇಗೌಡ, ಮಂಗಳಮ್ಮ, ಕೆ.ಬಿ.ಜಯಶಂಕರ್ ಇದ್ದರು. 
ಮಂಡ್ಯ

ದೇಶವನ್ನು ಒಂದಾಗಿ ಕಟ್ಟುವ ಶಕ್ತಿ ಸಂವಿಧಾನದಲ್ಲಿದೆ

ಹಲಗೂರು: ದೇಶದ ಏಕತೆ, ಸಮಗ್ರತೆ ಕಾಪಾಡುವಲ್ಲಿ ಸಂವಿಧಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜಾತಿ, ಧರ್ಮ, ಭಾಷೆ, ಮತ್ತು ಆಚರಣೆಗಳಲ್ಲಿ ವೈವಿಧ್ಯತೆ ಇದ್ದರೂ ದೇಶವನ್ನು ಒಂದಾಗಿ ಕಟ್ಟುವ ಶಕ್ತಿ ನಮ್ಮ ಸಂವಿಧಾನದಲ್ಲಿದೆ ಎಂದು ಪಿಎಸ್‌ಐ ಲೋಕೇಶ್ ತಿಳಿಸಿದರು.
ಸಮೀಪದ ಕೊನ್ನಾಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಮತ್ತು ಅಂಬೇಡ್ಕರ್ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ರಚಿಸಿದ ಸಂವಿಧಾನವು ದೇಶದ ಸರ್ವರಿಗೂ ಹಕ್ಕುಗಳು, ಅಧಿಕಾರ ಜತೆಗೆ ಸಮಾನ ಅವಕಾಶಗಳನ್ನು ನೀಡಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಿ ಎಂದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ಚಿರಾಗ್ ಎಸ್.ಮೂರ್ತಿ, ಡಿ.ಪೂಜಾಶ್ರೀ, ಸುಕೃತಾ, ಹೇಮಾವತಿ, ಪಲ್ಲವಿ, ಕೆ.ಎಸ್.ಮೊಹೀತ್, ಕೆ.ಜಿ.ಪ್ರೀತಮ್, ಆರ್.ಪ್ರೀತಮ್ ಗೌಡ, ಕೆ.ಆರ್.ಸುಶಾಂತ್, ಎ.ಅಮೃತಾ ಅವರನ್ನು ಸನ್ಮಾನಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್.ಆರ್. ಸಿದ್ದರಾಜು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಿವಲಿಂಗೇಗೌಡ, ಮಂಗಳಮ್ಮ, ಗ್ರಾಮಸ್ಥರಾದ ಕೆ.ಬಿ.ಜಯಶಂಕರ್, ಕೆ.ಬಿ.ಆನಂದಕುಮಾರ್, ಕೆ.ಜಿ.ಸಿದ್ಧಲಿಂಗಮೂರ್ತಿ, ಕೆ.ಟಿ.ಗಿರೀಶ್, ಕೆ.ಎಸ್.ಮನೋಜ್ ಕುಮಾರ್, ವಸಂತಕುಮಾರ, ಮಧುಸೂಧನ್, ದೇವರಾಜು, ಕೆ.ಎನ್.ಗಿರೀಶ್ ಕುಮಾರ್, ಕಟಕಯ್ಯ, ಮುದ್ದಯ್ಯ, ನಾಗಸಿದ್ದಯ್ಯ, ಸ್ವಾಮಿ ಭಾಗವಹಿಸಿದ್ದರು.