ಮದ್ದೂರು ನಗರದ ದಂಡಿನ ಮಾರಮ್ಮ ದೇವಾಲಯದ ಬಳಿ ಜಿಲ್ಲಾಮಟ್ಟದ ಗಾಳಿಪಟ ಸ್ಪರ್ಧೆಗೆ ತಗ್ಗಹಳ್ಳಿ ಚಂದ್ರು ಚಾಲನೆ ನೀಡಿದರು. ಚಂದ್ರಶೇಖರ್, ರಾಜಶೇಖರ್, ಶಂಕರಯ್ಯ, ಶಿವಕುಮಾರ್, ಗುರುಸ್ವಾಮಿ, ಲಾರಾಪ್ರಸನ್ನ, ಪುನೀತ್ ಇದ್ದರು.  
ಮಂಡ್ಯ

ಕ್ರೀಡಾಸ್ಫೂರ್ತಿ ಬೆಳೆಸುವುದೇ ಗಾಳಿಪಟ ಸ್ಪರ್ಧೆ ಉದ್ದೇಶ

ಪ್ರಮುಖ ಮುಖ್ಯಾಂಶಗಳು

  • ಅಪ್ಪಾಜಿಗೌಡ ಚಾರಿ ಟ್ರಬಲ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ಚಂದ್ರು ಅಭಿಪ್ರಾಯ

ಮದ್ದೂರು:

ಗಾಳಿಪಟ ಸ್ಪರ್ಧೆ ಕೇವಲ ಮನರಂಜನೆ ಆಟವಲ್ಲ, ಇದು ಸಂಸ್ಕೃತಿ, ಸಾಮರಸ್ಯ ಮತ್ತು ಕೌಶಲವನ್ನು ಉತ್ತೇಜಿಸುವ ಪ್ರಮುಖ ಚಟುವಟಿಕೆಯಾಗಿದೆ ಎಂದು ಅಪ್ಪಾಜಿಗೌಡ ಚಾರಿ ಟ್ರಬಲ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ಚಂದ್ರು ತಿಳಿಸಿದರು.

ನಗರದ ದಂಡಿನ ಮಾರಮ್ಮ ದೇವಾಲಯದ ಬಳಿ ಭಾರತ್ ವಿಕಾಸ್ ಪರಿಷತ್ ಮದ್ದೂರು, ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಇವರ ವತಿಯಿಂದ ದಿವಂಗತ ಅಪ್ಪಾಜಿಗೌಡ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಗಾಳಿಪಟ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಹಬ್ಬಗಳ ಸಂದರ್ಭದಲ್ಲಿ ಜನರನ್ನು ಒಟ್ಟುಗೂಡಿಸುವುದು, ಸೃಜನಶೀಲತೆ ಮೆರೆಯುವುದು ಮತ್ತು ಯುವಜನರಲ್ಲಿ ತಾಳ್ಮೆ ಹಾಗೂ ಕ್ರೀಡಾಸ್ಫೂರ್ತಿ ಬೆಳೆಸುವುದು ಗಾಳಿಪಟ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲಾ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ. ಸ್ವಾಮಿ ಮಾತನಾಡಿ, ಯುವಜನರು ಪೂರ್ವಿಕರ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಗ್ರಾಮೀಣ ಸಂಸ್ಕೃತಿಗೆ ನಾವೆಲ್ಲ ಮನ್ನಣೆ ನೀಡಬೇಕಾಗಿದೆ ಎಂದರು.
ಗಮನ ಸೆಳೆದ ಪಟಗಳು: ಹದ್ದು, ಚಿಟ್ಟೆ, ಸ್ವಾಮಿ ವಿವೇಕಾನಂದ, ನಾಲ್ವಡಿ ಕೃಷ್ಣರಾಜ ಒಡೆಯರ್, ಡಿ ಬಾಸ್, ಕಾರ್ಗಿಲ್ ವಿಜಯೋತ್ಸವದ ಸೇರಿದಂತೆ ಇನ್ನಿತರ ಗಾಳಿಪಟಗಳು ಪ್ರೇಕ್ಷಕ ಗಮನ ಸೆಳೆದವು.
ವಿಜೇತರ ವಿವರ: ಅಭಿಷೇಕ್, ಮದ್ದೂರು ತಾಲೂಕು ಯರಗನಹಳ್ಳಿ (ಪ್ರ), ರಾಮಕೃಷ್ಣ, ಪಾಂಡವಪುರ ತಾಲೂಕು, ದೊಡ್ಡ ಬ್ಯಾಡರಹಳ್ಳಿ (ದ್ವಿ), ಪ್ರೀತಂ, ಪಾಂಡವಪುರ ತಾಲೂಕು ಕನಕ ಮರಡಿ, ತೃತೀಯ ಬಹುಮಾನ ಪಡೆದರು.
ದೀಕ್ಷಾ, ಹುಸೇನ್‌ಪಾಷ, ಮುಬಾರಕ್, ಧ್ರುವ ಪಿ. ಗೌಡ, ಸೈಯದ್ ಮದ್ದೂರು, ಭಾನ್ವಿಗೌಡ ದೇಶಹಳ್ಳಿ, ರೋಹಿತ್ ಚಾಮನಹಳ್ಳಿ, ಪಾವನಿಗೌಡ ಗೂಳೂರು, ಸಮಾಧಾನಕರ ಬಹುಮಾನ ಪಡೆದರು.

ಭಾವಿಪ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ರಾಜಶೇಖರ್, ಶಂಕರಯ್ಯ, ಶಿವಕುಮಾರ್, ಗುರುಸ್ವಾಮಿ, ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಲಾರ ಪ್ರಸನ್ನ, ಅಂತಾರಾಷ್ಟ್ರೀಯ ಗಾಳಿಪಟ ಸ್ಪರ್ಧೆಯ ವಿಜೇತ ಪುನೀತ್ ಗೂಳೂರು ಇತರರಿದ್ದರು.