ಮದ್ದೂರು ನಗರಸಭೆ ವ್ಯಾಪ್ತಿಯ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಸಾರ್ವಜನಿಕರು ದಿನನಿತ್ಯ ಕಸದರಾಶಿ ಹಾಕುತ್ತಿದ್ದ ಸ್ಥಳದಲ್ಲಿ ರಂಗೋಲಿ ಹಾಕಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿರುವುದು.
- ಆಸನದ ವ್ಯವಸ್ಥೆ ಮಾಡಿದ ಅಧಿಕಾರಿಗಳು
- ದಿನನಿತ್ಯ ಕಸದರಾಶಿ ಹಾಕುತ್ತಿದ್ದ ಸ್ಥಳದಲ್ಲಿ ರಂಗೋಲಿ ಹಾಕಿ ಆಸನದ ವ್ಯವಸ್ಥೆ
ಮದ್ದೂರು: ನಗರಸಭೆ ವ್ಯಾಪ್ತಿಯ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಸಾರ್ವಜನಿಕರು ದಿನನಿತ್ಯ ಕಸದರಾಶಿ ಹಾಕುತ್ತಿದ್ದ ಸ್ಥಳದಲ್ಲಿ ರಂಗೋಲಿ ಹಾಕಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡುವ ಮೂಲಕ ನಗರಸಭೆ ಅಧಿಕಾರಿಗಳು ಗಮನ ಸೆಳೆದಿದ್ದಾರೆ.
ರಸ್ತೆಯಲ್ಲಿ ಕಸವನ್ನು ಹಾಕಬೇಡಿ ಎಂದು ಸಾಕಷ್ಟು ಬಾರಿ ಸಾರ್ವಜನಿಕರಿಗೆ ಮಾಹಿತಿ ನೀಡಿ, ಅರಿವು ಮೂಡಿಸುತ್ತಿದ್ದರು ಸಹ ಕೆಲ ಸಾರ್ವಜನಿಕರು ಕಸವನ್ನು ತಂದು ರಸ್ತೆ ಪಕ್ಕ ಹಾಕುತ್ತಿದ್ದರು. ಆದ್ದರಿಂದ ಕಸ ಹಾಕುತ್ತಿದ್ದ ಸ್ಥಳದಲ್ಲಿ ಸಾರ್ವಜನಿಕರು ಕುಳಿಕೊಳ್ಳಲು ಆಸನದ ವ್ಯವಸ್ಥೆ ಮಾಡಿ, ಬಣ್ಣದ ರಂಗೋಲಿ ಹಾಕಿ ಕಸ ಹಾಕದಂತೆ ಗುರುವಾರ ಅರಿವು ಮೂಡಿಸಿರುವುದು ನಾಗರಿಕರ ಮೆಚ್ಚುಗೆಗೆ ಕಾರಣವಾಯಿತು.
ಬೆಳಗ್ಗೆ ನಗರಸಭೆ ವತಿಯಿಂದ ಬರುವ ಆಟೋ ಸಂಗ್ರಹಿಸುವ ವಾಹನಕ್ಕೆ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕ ಮಾಡಿ ಹಾಕಬೇಕು. ನಮ್ಮ ಮದ್ದೂರು ನಮ್ಮ ಸ್ವಚ್ಛತೆ ಎಂಬ ಘೋಷಣೆಯಂತೆ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕದಂತೆ ಅಧಿಕಾರಿಗಳು ಅರಿವು ಮೂಡಿಸಿದರು.