ನೂತನ ಸಚಿವರಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಶಾಸಕ ಕೆ.ಎಂ.ಉದಯ್ ಅವರ ನೇತೃತ್ವದಲ್ಲಿ ನಿಡಘಟ್ಟದಲ್ಲಿ ಕ್ರೇನ್‌ನಲ್ಲಿ ಭಾರಿ ಗಾತ್ರದ ಕಬ್ಬಿನ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ದಿನೇಶ್‌ಗೂಳಿಗೌಡ, ಶಿವಣ್ಣ, ಚಲುವರಾಜು, ಹರೀಶ್‌ಬಾಬು, ಕೆ.ಆರ್.ಮಹೇಶ್ ಸೇರಿದಂತೆ ಇತರರು ಇದ್ದರು.
- ಮದ್ದೂರಿಗೆ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಆಗಮನ
ನೂತನ ಸಚಿವರಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಶಾಸಕ ಕೆ.ಎಂ.ಉದಯ್ ಅವರ ನೇತೃತ್ವದಲ್ಲಿ ಕ್ರೇನ್‌ನಲ್ಲಿ ಭಾರಿ ಗಾತ್ರದ ಕಬ್ಬಿನ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ನೂತನ ಸಚಿವರನ್ನು ಅಭಿನಂದಿಸಿದ ಮಾತನಾಡಿದ ಶಾಸಕ ಕೆ.ಎಂ.ಉದಯ್, ಜಿಲ್ಲೆಯ ಇಬ್ಬರಿಗೆ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿರುವುದು ಸಂತೋಷದ ವಿಷಯವಾಗಿದೆ ಅಭಿವೃದ್ಧಿಯ ವಿಷಯದಲ್ಲಿ ಮತ್ತಷ್ಟು ವೇಗ ಬಂದತ್ತಾಗಿದೆ. ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು.
ತಾಲೂಕಿನ ಗಡಿ ಭಾಗವಾದ ನಿಡಘಟ್ಟದ ಬೆಂಗಳೂರು ಮೈಸೂರು ಹೆದ್ದಾರಿಗೆ ಶನಿವಾರ ಸಚಿವದ್ವಯರು ಆಗಮಿಸಿದಾಗ ಶಾಸಕ ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್‌ಗೂಳಿಗೌಡ, ಶಿವಣ್ಣ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಮನ್‌ಮುಲ್ ಅಧ್ಯಕ್ಷ ಹರೀಶ್‌ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಮುಖಂಡರಾದ ಸಿ.ಟಿ.ಶಂಕರ್, ಕೆ.ಎನ್.ದಿವಾಕರ್, ಜೋಗಿಗೌಡ್ರು, ಎಂ.ಪಿ.ಅಮರ್‌ಬಾಬು, ಕೆ.ಆರ್.ಮಹೇಶ್, ಸುರೇಶ್‌ಕಂಠಿ, ರಾಮಕೃಷ್ಣ, ದೇವು, ಯಶವಂತ್ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೂವಿನ ಹಾರಹಾಕಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಸಚಿವದ್ವಯರ ಆಗಮನದ ಹಿನ್ನೆಲೆಯಲ್ಲಿ ನಿಡಘಟ್ಟ ಗಡಿ ಭಾಗದಲ್ಲಿ ಜಿಲ್ಲಾಡಳಿತ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು.