ಹನುಮಂತನಗರದಲ್ಲಿ ಭಾರತೀ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನೂತನ ವಸತಿ ನಿಲಯಕ್ಕೆ ವಿಧಾನ ಪರಿಷತ್ ಸದಸ್ಯ, ಭಾರತೀ ಶಿಕ್ಷಣ ಸಂಸ್ಥೆಯ ಚೇರ‌್ಮನ್ ಮಧು ಜಿ.ಮಾದೇಗೌಡ ಚಾಲನೆ ನೀಡಿದರು. ಜಿ.ಡಿ.ಹಳ್ಳಿ ಸಿದ್ದೇಗೌಡ, ಕೆ.ಎಸ್.ಗೌಡ, ಎಸ್. ನಾಗರಾಜು ಇತರರು ಇದ್ದರು.  
ಮಂಡ್ಯ

ಹಾಸ್ಟೆಲ್‌ನಲ್ಲಿ 500 ವಿದ್ಯಾರ್ಥಿಗಳಿಗೆ ಅವಕಾಶ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಭಾರತೀ ಶಿಕ್ಷಣ ಸಂಸ್ಥೆಯ ಚೇರ್ಮನ್ ಮಧು ಜಿ.ಮಾದೇಗೌಡ ಹೇಳಿಕೆ
  • ನೂತನ ವಸತಿ ನಿಲಯಕ್ಕೆ ಚಾಲನೆ
ಕೆ.ಎಂ.ದೊಡ್ಡಿ: ಸಮೀಪದ ಹನುಮಂತನಗರದಲ್ಲಿ ಭಾರತೀ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನೂತನ ವಸತಿ ನಿಲಯಕ್ಕೆ ವಿಧಾನ ಪರಿಷತ್ ಸದಸ್ಯ, ಭಾರತೀ ಶಿಕ್ಷಣ ಸಂಸ್ಥೆಯ ಚೇರ‌್ಮನ್ ಮಧು ಜಿ.ಮಾದೇಗೌಡ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಹಾಸ್ಟೆಲ್‌ನಲ್ಲಿ 500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭಾರತೀ ವಸತಿ ಶಾಲೆಗೆ ಈಗಾಗಲೇ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಪ್ರವೇಶ ಕಲ್ಪಿಸಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ, ಫಾರ್ಮಸಿ, ಅಗ್ರಿಕಲ್ಚರ್, ತೋಟಗಾರಿಕೆಯ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು ಎಂದರು.
ಹೊಸದಾಗಿ ನಿರ್ಮಿಸಲಾದ ಹಾಸ್ಟೆಲ್ ಕಟ್ಟಡವು ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಹಾಸ್ಟೆಲ್‌ನಲ್ಲಿ ಸುಸಜ್ಜಿತ ಕೊಠಡಿಗಳು, ವಿಶಾಲ ಅಧ್ಯಯನ ಕೊಠಡಿ ಮತ್ತು ಮನರಂಜನಾ ಪ್ರದೇಶಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಭಾರತೀ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್ ಜಿ.ಮಧು ಮಾತನಾಡಿ, 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಆಧುನಿಕ ಸೌಲಭ್ಯದ ಜತೆಗೆ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ನೂತನ ಹಾಸ್ಟೆಲ್ ಕಟ್ಟಡ ಪೂಜೆ ಮತ್ತು ಹೋಮ, ದೇವತಾ ಕಾರ್ಯಗಳು ಅದ್ದೂರಿಯಾಗಿ ನಡೆಯಿತು. ಸರಸ್ವತಿ ಮೂಲ ಮಂತ್ರ ಹೋಮ, ಮಹಾ ಸುದರ್ಶನ ಚಕ್ರ ಮಂಡಲ, ಗಣೇಶ ಆರಾಧನೆ, ವಾಸ್ತು ಬಲಿ ಪೂಜೆ, ನವಗ್ರಹ ಪೂಜೆ, ಸಪ್ತ ಮಹದೇವತೆ ಪೂಜೆ, ಪುಣ್ಯ, ಮೃತ್ಯುಂಜಯ ಕೂರ್ಮ ಅಗ್ನಿಕೊಂಡ, ಲಕ್ಷ್ಮೀ, ಸರಸ್ವತಿ ಪೂಜೆ, ವಿಷ್ಣು ಪೂಜೆ, ಜಯ ವಿಜಯ, ಪುಣ್ಯ ಕಳಸ, ವರುಣ - ವಾಸ್ತು ಆರಾಧನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹನುಮಂತನಗರ ಕ್ಯಾಂಪಸ್ ಕಾರ್ಯದರ್ಶಿ ಜಿ.ಡಿ.ಹಳ್ಳಿ ಸಿದ್ದೇಗೌಡ, ಶ್ರೀ ಆತ್ಮಲಿಂಗೇಶ್ವರ ದೇವಾಲಯ ಧರ್ಮದರ್ಶಿ ಮಂಡಳಿ ಸದಸ್ಯ ಕೆ.ಎಸ್.ಗೌಡ, ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಎಸ್. ನಾಗರಾಜು, ಹೆಲ್ತ್ ಸೈನ್ಸ್‌ನ ನಿರ್ದೇಶಕ ಡಾ.ತಮಿಜ್ ಮಣಿ, ಕಾಲೇಜು ಪ್ರಾಂಶುಪಾಲ ಪುಟ್ಟಸ್ವಾಮಿ, ಭಾರತೀ ಎಕ್ಸ್‌ಲೆನ್ಸ್ ಪ್ರಾಂಶುಪಾಲ ಸಿ.ರಮ್ಯಾ ಮತ್ತಿತರಿದ್ದರು.