ಶ್ರೀರಂಗಪಟ್ಟಣದ ತಾಲೂಕು ಕಚೇರಿ ಎದುರು ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.
ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಕಚೇರಿ ಎದುರು ಭೂಮಿ ತಾಯಿ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮಿಳುನಾಡಿಗೆ ನೀರು ಬಿಟ್ಟಿರುವ ಹೊಣೆ ಹೊರಬೇಕು ಎಂದು ಅಪಹಾಸ್ಯ ಮಾಡುವ ಮೂಲಕ ವಿನೂತನವಾಗಿ ಧರಣಿ ನಡೆಸಿದರು.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಾವೇರಿ ನ್ಯಾಯ ಮಂಡಳಿ ಎರಡು ರಾಜ್ಯಗಳ ನಡುವಿನ ಸೌಹಾರ್ದ ಬದಲಿಗೆ ಏಕಪಕ್ಷೀಯವಾಗಿ ತಮಿಳುನಾಡು ಪರ ಆದೇಶ ನೀಡುತ್ತಿದೆ. ರಾಜ್ಯದ ರೈತರನ್ನು ಸರ್ವನಾಶ ಮಾಡುವ ಪಣತೊಟ್ಟಂತಿದೆ. ತೀವ್ರ ಬರಗಾಲದ ನಡುವೆಯೂ ತಮಿಳುನಾಡಿಗೆ ಮತ್ತೆ 6 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ ನೀಡಿರುವುದು ನ್ಯಾಯ ಮಂಡಳಿಯ ನಡೆ ಒಪ್ಪುವಂತಹದಲ್ಲ ಎಂದು ದೂರಿದರು.
ಪ್ರಾಧಿಕಾರ ಎದುರು ರಾಜ್ಯದ ಬರ ಸ್ಥಿತಿಯನ್ನು ಸರಿಯಾಗಿ ಮನದಟ್ಟು ಮಾಡಿಕೊಡದೆ ನಿರ್ಲಕ್ಷೃ ತೋರಲಾಗಿದೆ. ಹೈನು ಬೆಳೆಗೆ ಕಟ್ಟು ನೀರು ಕೊಡುವುದಾಗಿ ಘೋಷಿಸಿದ ಸರ್ಕಾರ ಈಗ ನೀರು ಹರಿಸದೆ ಕಾವೇರಿ ಕಣಿವೆಯ ರೈತರು ಮತ್ತು ಜಾನುವಾರುಗಳಿಗೆ ವಿಷ ನೀಡಲು ಮುಂದಾಗಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡಬೇಕು ಆಗ್ರಹಿಸಿದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಜಯರಾಮೇಗೌಡ, ಜಗದೀಶ್, ಖಜಾಂಚಿ ಮಹದೇವು, ಮುಖಂಡರಾದ ರವಿಲಕ್ಷ್ಮಣ, ದೊಡ್ಡೇಗೌಡನಕೊಪ್ಪಲು ಮಹೇಶ್, ಮಹಾಲಿಂಗು, ಕೂಡಲಕುಪ್ಪೆ ಸ್ವಾಮಿಗೌಡ, ಸಿ.ಟಿ.ರಾಮಚಂದ್ರು, ಅಚ್ಚಪ್ಪನಕೊಪ್ಪಲು ಕೃಷ್ಣ, ಪಾಲಹಳ್ಳಿ ರಾಮಚಂದ್ರು, ಬಲ್ಲೇನಹಳ್ಳಿ ಮಹೇಶ್, ಹನುಮಂತನಗರ ಸ್ವಾಮಿ, ಬೆಳಗೊಳ ವಿಷಕಂಠು, ಚಿಂದಗಿರಿಕೊಪ್ಪಲು ಕೆಂಪೇಗೌಡ, ನಾಗಯ್ಯನಹುಂಡಿ ಶಿವಣ್ಣ, ಪೈ.ನಾಗಣ್ಣ, ರಾಮಕೃಷ್ಣ ಇದ್ದರು.