ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಲೆಯಲ್ಲಿ 15 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮುಖ್ಯಶಿಕ್ಷಕ ಗುರುಸ್ವಾಮಿ ಅವರಿಗೆ ದಂಪತಿ ಸಮೇತ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಅಭಿನಂದಿಸಲಾಯಿತು. ಆರ್.ಬಿ.ಮಹದೇವಸ್ವಾಮಿ, ನಾಡಗೌಡರ ಪುಟ್ಟರಾಜು, ಪುಟ್ಟಬುದ್ದಿ, ಎಚ್.ಮಹೇಶ್, ಮಂಜು, ಪ್ರಕಾಶ್, ಆರ್.ಬಿ.ಮಹೇಶ್, ಬಿ.ಪಿ.ಪುಟ್ಟಬುದ್ದಿ, ಸಹ ಶಿಕ್ಷಕ ವೃಂದ ಇದ್ದರು.  
ಮಂಡ್ಯ

ಶಿಕ್ಷಣ ಕಲಿತವರಿಂದ ಸಮಾಜದ ಅಭಿವೃದ್ಧಿ ಸಾಧ್ಯ

ರಾಗಿಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಆರ್.ಬಿ.ಮಹದೇವಸ್ವಾಮಿ ಅಭಿಮತ

ಮಳವಳ್ಳಿ: ತಾಲೂಕಿನ ರಾಗಿಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಿವೃತ್ತಿ ಹೊಂದಿದ ಮುಖ್ಯಶಿಕ್ಷಕ ಗುರುಸ್ವಾಮಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಎಸ್‌ಡಿಎಂಸಿ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಬಿ.ಮಹದೇವಸ್ವಾಮಿ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕಲಿತವರಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗಿದೆ. ಶಿಕ್ಷಕ ಹುದ್ದೆಯಲ್ಲಿ ಸೇವಾವಧಿಯನ್ನು ಉತ್ತಮವಾಗಿ ಪೂರೈಸಿ ನಿವೃತ್ತಿ ಹೊಂದುತ್ತಿರುವ ಗುರುಸ್ವಾಮಿ ಅವರ ನಿವೃತ್ತಿ ಜೀವನ ಸುಖಿಯಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಗೌಡರ ಪುಟ್ಟರಾಜು ಮಾತನಾಡಿ, ನಮ್ಮ ಶಾಲೆಯಲ್ಲಿ 15 ವರ್ಷಗಳು ಸುದೀರ್ಘವಾಗಿ ಮುಖ್ಯಶಿಕ್ಷಕರಾಗಿ ಗುರುಸ್ವಾಮಿ ಅವರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಶ್ರಮಿಸುವ ಮೂಲಕ ಶಾಲೆಗೆ ಉತ್ತಮ ಫಲಿತಾಂಶ ಸಿಗುವಂತೆ ಕಾಯ್ದುಕೊಂಡಿದ್ದರು. ಅವರ ಶೈಕ್ಷಣಿಕ ಸೇವೆ ಕರ್ತವ್ಯ ನಿಷ್ಠೆಯನ್ನು ಎಂದಿಗೂ ಮರೆಯಲಾಗದು ಎಂದು ಸ್ಮರಿಸಿದರು.
ಅಭಿನಂದನೆ ಸ್ವೀಕರಿಸಿದ ಮುಖ್ಯಶಿಕ್ಷಕ ಗುರುಸ್ವಾಮಿ ಮಾತನಾಡಿ, ನನ್ನ ಸೇವಾವದಿಯಲ್ಲಿ ವಿವಿಧೆಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಆದರೇ ದೀರ್ಘಕಾಲ ಇಲ್ಲಿನ ಶಾಲೆಯಲ್ಲಿ ಮುಖ್ಯಶಿಕ್ಷಕನಾಗಿ ಸೇವೆ ಸಲ್ಲಿಸಿದ ದಿನಗಳನ್ನು ನನ್ನ ಜೀವಿತಾವಧಿಯಲ್ಲಿ ಮರೆಯಲಾಗದು ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಸಹಪಾಠಿ ಶಿಕ್ಷಕರು ಸೇರಿದಂತೆ ಹಿರಿಯ ವಿದ್ಯಾರ್ಥಿಗಳು ನಿವೃತ್ತಿ ಹೊಂದಿದ ಮುಖ್ಯಶಿಕ್ಷಕ ಗುರುಸ್ವಾಮಿ ದಂಪತಿಯನ್ನು ಆತ್ಮಿಯವಾಗಿ ಅಭಿನಂದಿಸುವ ಮೂಲಕ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಪುಟ್ಟಬುದ್ದಿ, ಸದಸ್ಯರಾದ ಎಚ್.ಮಹೇಶ್, ಮಂಜು, ಪ್ರಕಾಶ್, ಆರ್.ಬಿ.ಮಹೇಶ್, ಸಹ ಶಿಕ್ಷಕ ವೃಂದ ಹಾಗೂ ಮುಖಂಡರಾದ ಬಿ.ಪಿ.ಪುಟ್ಟಬುದ್ದಿ, ಶಿವಕುಮಾರ್, ಪ್ರಕಾಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರು ಇದ್ದರು.