ಕೃಷ್ಣರಾಜಸಾಗರ ಅಣೆಕಟ್ಟೆಯ ಮುಂಭಾಗದಲ್ಲಿ ಕಾವೇರಿ ನೀರಾವರಿ ನಿಗಮದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಯಿತು. ಶಾಸಕ ರಮೇಶ ಬಂಡಿಸಿದ್ದೇಗೌಡ, ವೆಂಕಟರಮಣಪ್ಪ, ತಹಸೀಲ್ದಾರ್ ಚೇತನಾ ಯಾದವ್, ಚಂದ್ರು, ಫಾರುಕ್ ಅಭು, ಲೋಹಿತ್ ಇತರರಿದ್ದರು. 
ಮಂಡ್ಯ

ನಾಡಿಗೆ ನಾಲ್ವಡಿ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ
ಕೆ.ಆರ್.ಸಾಗರ: ಕಾವೇರಿ ನೀರಾವರಿ ನಿಗಮ ಮತ್ತು ತಾಲೂಕು ಆಡಳಿತದಿಂದ ಗುರುವಾರ ಕೃಷ್ಣರಾಜಸಾಗರ ಅಣೆಕಟ್ಟೆಯ ಮುಂಭಾಗ ರಾಜರ್ಷಿ ನಾಲ್ವಡಿ ಜಯಂತಿ ಆಚರಿಸಲಾಯಿತು.
ಅಣೆಕಟ್ಟೆಯ ದಕ್ಷಿಣ ಬೃಂದಾವನದ ಮುಖ್ಯದ್ವಾರದ ಮುಂಭಾಗದಲ್ಲಿರುವ ನಾಲ್ವಡಿ ಅವರ ಪ್ರತಿಮೆಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕರು, ನಾಲ್ವಡಿ ಅವರ ದೂರದೃಷ್ಟಿಯಿಂದ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಿದೆ. ಅಣೆಕಟ್ಟೆ ನಿರ್ಮಾಣದಿಂದ ಜಿಲ್ಲೆಯ ಜನರು ಸಮೃದ್ಧಿಯಿಂದ ಜೀವನ ನಡೆಸುತ್ತಿದ್ದಾರೆ. ನಾಲ್ವಡಿ ಅವರು ಶಿಕ್ಷಣ, ಜಾತಿ ಪದ್ಧತಿ, ಬಾಲ್ಯ ವಿವಾಹ ರದ್ದು, ಮಹಿಳೆಯರಿಗೆ ಶಿಕ್ಷಣ ಸೇರಿದಂತೆ ರಾಜ್ಯದಲ್ಲಿ ಅನೇಕ ಕಾರ್ಖಾನೆಗಳು, ವಿದ್ಯುತ್ ಉತ್ಪಾದನೆ, ಬ್ಯಾಂಕಿಂಗ್ ಸೇರಿದಂತೆ ಅನೇಕ ಯೋಜನೆಗಳನ್ನು ಅಂದೇ ಮಾಡಿದ್ದರು. ನಾಡಿಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ಕಾ.ನೀ.ನಿಗಮ ಕಾರ್ಯಪಾಲಕ ಇಂಜಿನಿಯರ್ ವೆಂಕಟರಮಣಪ್ಪ, ತಹಸೀಲ್ದಾರ್ ಚೇತನಾ ಯಾದವ್, ಚಂದ್ರು, ಫಾರುಕ್ ಅಭು, ಲೋಹಿತ್, ರಶ್ಮಿ, ಲೋಹಿತ್, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಗೋವರ್ದನ್, ಕಾ.ನೀ.ನಿಗಮ ಲೆಕ್ಕ ಅಧೀಕ್ಷಕ ಕೆ.ಆರ್.ಶ್ರೀನಿವಾಸ್, ಕೆ.ಆರ್.ಸಾಗರ ಗ್ರಾ.ಪಂ ಮಾಜಿ ಸದಸ್ಯ ಜಗದೀಪ್ ಸಿಂಗ್, ದೇವರಾಜು, ಅಭಿಲಾಷ್, ಶಿವಕುಮಾರ್, ಅಕಿಬ್ ಜಾವಿದ್, ಸಹನಾ, ರಾಜಸ್ವ ನಿರಿಕ್ಷಕ ಪ್ರಸನ್ನ, ಪುರಸಭಾ ಮಾಜಿ ಅಧ್ಯಕ್ಷ ದಿನೇಶ್, ರಾಜಣ್ಣ ಇತರರಿದ್ದರು.