ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂನ ಚಂದಗಾಲು ರಸ್ತೆಯ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ತಾಲೂಕಿನ ನಗುವನಹಳ್ಳಿ ಗ್ರಾಮದ ರವಿಕುಮಾರ್ ಅವರ ಪುತ್ರ ಮಹದೇವಸ್ವಾಮಿ(15) ಮೃತ. 9ನೇ ತರಗತಿಗೆ ಉತ್ತೀರ್ಣಗೊಂಡಿದ್ದ ಬಾಲಕ ಮಹದೇವಸ್ವಾಮಿ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಗಂಜಾಂನ ಸಮೀಪದ ಚಂದಗಾಲು ರಸ್ತೆಯಲ್ಲಿನ ನೀರು ಸರಬರಾಜು ಘಟಕ ಬಳಿಯ ಕರಿಕಲ್ಲು ಬಾಯಿ ಎಂಬ ನದಿ ಮಧ್ಯೆಯ ದ್ವೀಪದ ಬಳಿಗೆ ನಾಲ್ವರು ಸ್ನೇಹಿತರೊಂದಿಗೆ ಈಜಲ ಹೋಗಿದಾಗ ಈ ಘಟನೆ ಸಂಭವಿಸಿದೆ.
ಆತನ ಸ್ನೇಹಿತರು ಸ್ಥಳದಲ್ಲಿದ್ದ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದ್ದಾರೆ. ಕೊನೆಗೆ ಅಗ್ನೀಶಾಮಕ ಸಿಬ್ಬಂದಿ ಶವ ಹೊರತೆಗೆದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಪಾಲಕರು ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.