ಮಳವಳ್ಳಿ ತಾಲೂಕಿನ ಜವನಗನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಉದ್ಘಾಟಿಸಿದರು. ನಾಗರಾಜು, ಮಹಾ ಜಯಲಿಂಗು, ಶಿವಕುಮಾರ್, ಕೃಷ್ಣ, ಮಹದೇವು, ದೇವರಾಜು, ಶಿವಶಂಕರ್, ಬಿ.ಜೆ.ಸತ್ಯವತಿ, ಭಾಸ್ಕರ್, ರೂಪ, ರಘು, ಜೆ.ಕೆ.ಕುಮಾರ, ಮಧು, ನವೀನ್, ಶಾಂತರಾಜು, ಶರತ್ ಇದ್ದರು.
- ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ ಅಭಿಪ್ರಾಯ
ಮಳವಳ್ಳಿ: ಶಾಲೆಗಳಲ್ಲಿ ಶಿಕ್ಷಕರು ಜ್ಞಾನ ನೀಡುವ ಮೂಲಕ ಮಕ್ಕಳ ಬದುಕಿಗೆ ದಾರಿದೀಪವಾಗಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಮಲ್ಲಿಕಾರ್ಜುನಯ್ಯ ಹೇಳಿದರು.
ತಾಲೂಕಿನ ಬಿ.ಜಿ.ಪುರ ಹೋಬಳಿಯ ಜವನಗಹಳ್ಳಿ ಗ್ರಾಮದಲ್ಲಿ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ಹೊಂದಿರುವ ಚಿಕ್ಕಹುಚ್ಚು (ಸಿ.ಎಚ್.ನಾಯಕ್) ಅವರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕ ಹುದ್ದೆ ಬಹಳ ಶ್ರೇಷ್ಠವಾದದ್ದು, ಶಿಕ್ಷಕರನ್ನು ದೇವರಿಗೆ ಹೋಲಿಸುತ್ತಾರೆ. ಅಂತಹ ಶಿಕ್ಷಕರ ಹುದ್ದೆಗೆ ಸೇರಿ ಸುದೀರ್ಘ 27 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ಪಡೆದಿರುವುದು ಶ್ಲಾಘನೀಯ.
ಹನೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪ್ರತಿಭಾ, ಸರ್ಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ನಾಗರಾಜು, ಸಿ.ಆರ್.ಪಿ ಮಹಾ ಜಯಲಿಂಗು, ಶಿವಕುಮಾರ್, ಕೃಷ್ಣ, ಎಸ್‌ಡಿಎಂಸಿ ಅಧ್ಯಕ್ಷ ಮಹದೇವು, ಕಸಾಪ ತಾಲೂಕು ಮಾಜಿ ಅಧ್ಯಕ್ಷ ದೇವರಾಜು, ಮುಖ್ಯ ಶಿಕ್ಷಕ ಎಚ್.ಎಸ್.ಶಿವಶಂಕರ್, ಬಿ.ಜೆ.ಸತ್ಯವತಿ, ಭಾಸ್ಕರ್, ರೂಪಾ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಘು, ಹಳೇ ವಿದ್ಯಾರ್ಥಿಗಳಾದ ಜೆ.ಕೆ.ಕುಮಾರ, ಮಧು, ನವೀನ್, ಶಾಂತರಾಜು, ಶರತ್ ಇತರರಿದ್ದರು.