ಮದ್ದೂರು ತಾಲೂಕಿನ ಮಾನಸ ವಿದ್ಯಾಸಂಸ್ಥೆಯಲ್ಲಿ ಲಯನ್ಸ್ ಸಂಸ್ಥೆಯ ವತಿಯಿಂದ ಉಚಿತ ಉಚಿತ ವಾಕ್ ಶ್ರವಣ ದೋಷ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಉದ್ಘಾಟನೆಯನ್ನು ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಉದ್ಘಾಟಿಸಿದರು. ಕೆ.ಎಲ್.ರಾಜಶೇಖರ, ವಿ.ವಿ.ಕೃಷ್ಣಾರೆಡ್ಡಿ, ಡಾ.ಎನ್.ಕೃಷ್ಣೇಗೌಡ, ಶಶಿ ಖುರಾನ, ಕೆಂಗಲ್‌ಗೌಡ, ರಾಮಕೃಷ್ಣೇಗೌಡ, ಶಿವಕುಮಾರ್ ಇದ್ದರು. 
ಮಂಡ್ಯ

ಶಿಕ್ಷಣದ ಜತೆಗೆ ಆರೋಗ್ಯದ ಕಡೆಗೂ ಆಸಕ್ತಿ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಕಿವಿಮಾತು
ಮದ್ದೂರು : ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಆರೋಗ್ಯದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಮಾನಸ ವಿದ್ಯಾಸಂಸ್ಥೆಯ ಅಧ್ಯಕ್ಷ ವಿ.ಕೆ.ಜಗದೀಶ್ ಕಿವಿ ಮಾತು ಹೇಳಿದರು.
ತಾಲೂಕಿನ ಬೆಸಗರಹಳ್ಳಿ ಮಾನಸ ವಿದ್ಯಾಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ, ಮದ್ದೂರು ಲಯನ್ಸ್ ಸಂಸ್ಥೆ, ಲೇಡಿ ಬರ್ಡ್ ಲಯನ್ಸ್ ಕ್ಲಬ್ ಬೆಂಗಳೂರು, ಮದ್ದೂರು ಕದಂಬ ಲಯನ್ಸ್ ಸಂಸ್ಥೆ, ಮಾನಸ ಎಜುಕೇಷನ್ ಟ್ರಸ್ಟ್ ಬೆಸಗರಹಳ್ಳಿ, ಡಾ.ಎಸ್.ಆರ್. ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆ ಬೆಂಗಳೂರು, ಅಲೋಕ ವಿಷನ್ ಮತ್ತು ಬೆಂಗಳೂರು ವೆಸ್ಟ್, ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಾಕ್ ಮತ್ತು ಶ್ರವಣ ದೋಷ ಹಾಗೂ ಕಣ್ಣಿನ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣದಷ್ಟೆ ಆರೋಗ್ಯವು ಮುಖ್ಯವೆಂದು ತಿಳಿದುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಕಠಿಣ ಪರಿಶ್ರಮ ಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಲಯನ್ಸ್ ಸಂಸ್ಥೆಯ ಜಿಲ್ಲಾ ಪ್ರಾಂತಪಾಲ ಕೆ.ಎಲ್.ರಾಜಶೇಖರ ಮಾತನಾಡಿ, ಲಯನ್ಸ್ ಸಂಸ್ಥೆ ಹಲವಾರು ವರ್ಷಗಳಿಂದ ಸಮಾಜ ಮುಖಿ ಹಾಗೂ ಆರೊಗ್ಯ ಉಚಿತ ತಪಾಸಣಾ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲ ಆರೊಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ ಎಂದರು.
ಆರೋಗ್ಯ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ವಾಕ್ ಶ್ರವಣ ದೋಷ ಹಾಗೂ ಕಣ್ಣಿನ ತಪಾಸಣೆ ಶಿಬಿರದ ಪ್ರಯೋಜನ ಪಡೆದುಕೊಂಡರು.
ಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ಮಾಜಿ ಅಧ್ಯಕ್ಷ ವಿ.ವಿ.ಕೃಷ್ಣಾರೆಡ್ಡಿ, ಮಲ್ಟಿಪಲ್ ಕೌನ್ಸಿಲ್ ನಿಕಟಪೂರ್ವ ಚೇರ‌್ಮನ್ ಡಾ.ಎನ್.ಕೃಷ್ಣೇಗೌಡ, ಜಿಲ್ಲಾ ಮಾಜಿ ಪ್ರಾಂತಪಾಲೆ ಶಶಿ ಖುರಾನ, ವಾಕ್ ಶ್ರವಣ ಜಿಲ್ಲಾಧ್ಯಕ್ಷ ಹರ್ಷವರ್ಧನರೆಡ್ಡಿ, ಟಿರಾ ಕನ್‌ಸ್ಟ್ರಕ್ಷನ್‌ನ ದೇವೇಗೌಡ, ಜಿಲ್ಲಾ ಖಜಾಂಚಿ ಕೆ.ಎಸ್.ಸುನಿಲ್‌ಕುಮಾರ್, ಪ್ರಾಂತಿಯ ಅಧ್ಯಕ್ಷರಾದ ವಿ.ರಮೇಶ್, ರೇಣುಕಾಪ್ರಕಾಶ್, ವಲಯ ಅಧ್ಯಕ್ಷರಾದ ಸುಬ್ಬಾರೆಡ್ಡಿ, ಕೆಂಗಲ್‌ಗೌಡ, ಮದ್ದೂರು ಲಯನ್ಸ್ ಅಧ್ಯಕ್ಷ ರಾಮಕೃಷ್ಣೇಗೌಡ, ಮದ್ದೂರು ಕದಂಬ ಲಯನ್ಸ್‌ನ ಅಧ್ಯಕ್ಷ ಕೆ.ಶಿವಕುಮಾರ್, ಲೇಡಿ ಬರ್ಡ್ ಲಯನ್ಸ್ ಅಧ್ಯಕ್ಷೆ ಬಿಭಾಕುಮಾರಿ ಇದ್ದರು.