ಮದ್ದೂರು ನಗರದ ಪೇಟೆಬೀದಿ ಬಳಿ ಮತದಾರ ಕುಟುಂಬವೊಂದನ್ನು ಎಸ್.ಐ.ಆರ್ ಸಮೀಕ್ಷಾ ಸಿಬ್ಬಂದಿ ಸಂಪರ್ಕಿಸಿದ ವೇಳೆ ತಹಸೀಲ್ದಾರ್ ಶಿವಕುಮಾರ್ ಬೀರಾದಾರ್ ಜತೆಗೆ ತೆರಳಿ ಮಾಹಿತಿ ಸಂಗ್ರಹಿಸಿದರು. 
ಮಂಡ್ಯ

ಎಸ್‌ಐಆರ್ ಕಾರ್ಯಕ್ಕೆ ತಹಸೀಲ್ದಾರ್ ಸಾಥ್

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • SIR's work
ಮದ್ದೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಸಂಬಂಧ ನಿಯೋಜಿತ ಸಿಬ್ಬಂದಿಯೊಟ್ಟಿಗೆ ತಹಸೀಲ್ದಾರ್‌ಶಿವಕುಮಾರ್ ಬಿರಾದಾರ್ ಅವರೇ ಖುದ್ದು ಮನೆ ಮನೆಗೆ ಸಂಪರ್ಕಿಸಿ ಸಮೀಕ್ಷಾ ಕಾರ್ಯವನ್ನು ಶನಿವಾರ ಪರಿಶೀಲಿಸಿದರು.
ಪಟ್ಟಣದ ಪೇಟೆಬೀದಿ, ಶಿಕ್ಷಕರ ಬಡಾವಣೆ ಮತ್ತಿತರೆಡೆ ಎಸ್.ಐ.ಆರ್. ಸಂಬಂಧ ಮತದಾರರ ಮನೆಗಳಿಗೆ ಮಾಹಿತಿ ಸಂಗ್ರಹಕ್ಕಾಗಿ ಭೇಟಿ ನೀಡುತ್ತಿರುವ ಸಿಬ್ಬಂದಿ ಜತೆಗೆ ತೆರಳಿ ಸಮೀಕ್ಷಾ ಕಾರ್ಯ ಪರಿಶೀಲಿಸಿದರು.