ವಿದ್ಯಾಧಾರೆ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳು ವೈದ್ಯರ ವಸ್ತ್ರಧರಿಸಿರುವುದು.
ಹಲಗೂರು: ಇಲ್ಲಿನ ವಳಗೆರೆ ದೊಡ್ಡಿ ಗ್ರಾಮದಲ್ಲಿರುವ ವಿದ್ಯಾಧಾರೆ ಇಂಟರ್ನ್ಯಾಷನಲ್ ಶಾಲೆಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಪುಟಾಣಿ ಮಕ್ಕಳು ವೈದ್ಯರ ವಸತ್ರ ಧರಿಸಿ ತಮ್ಮ ಸಹಪಾಠಿಗೆ ತಪಾಸಣೆ ನಡೆಸುವ ರೀತಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.
ಪುಟಾಣಿ ಮಕ್ಕಳು ವಿಶಿಷ್ಟವಾಗಿ ವೈದ್ಯರ ವಸ್ತ್ರ ಧರಿಸಿಕೊಂಡು ರೋಗಿಗಳನ್ನು ತಪಾಸಣೆ ಮಾಡುವ ರೀತಿ ಶಾಲೆಯ ಮಕ್ಕಳನ್ನು ತಪಾಸಣೆ ನಡೆಸಿದರು. ಯಾವ ರೋಗಿಗೆ ಯಾವ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಸಭೆ ನಡೆಸುವ ರೀತಿ ಅವರು ಸಹ ಸಭೆ ನಡೆಸುವುದು ಒಂದು ವೈಶಿಷ್ಟವಾಗಿತ್ತು.
ಶಾಲೆಯ ಮೇಲ್ವಿಚಾರಕಿ ಎಚ್.ವಿ. ಶ್ವೇತಕುಮಾರಿ ವಿದ್ಯಾರ್ಥಿಗಳಿಗೆ ವೈದ್ಯರು ಉಪಯೋಗಿಸುವ ಸಲಕರಣೆಗಳ ಬಗ್ಗೆ ತಿಳಿಸಿಕೊಟ್ಟರು.
ಶಾಲೆಯ ಪ್ರಾಂಶುಪಾಲರಾದ ಸಂಧ್ಯಾರಾಣಿ ಮಾತನಾಡಿ, ಪ್ರತಿ ವರ್ಷ ಶಾಲೆಯಲ್ಲಿ ಜು.1ರಂದು ವೈದ್ಯರ ದಿನಾಚರಣೆ ಆಚರಿಸುತ್ತೇವೆ. ಆರೋಗ್ಯ ಸಮಸ್ಯೆ ಬಂದರೆ ಅಗತ್ಯ ಚಿಕಿತ್ಸೆ ನೀಡಿ, ಆರೈಕೆ ಮಾಡುತ್ತಾರೆ. ಆದುದರಿಂದ ಈ ದಿನವನ್ನು ಅವರಿಗಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ದಿನ ನಮ್ಮ ಶಾಲೆಯಲ್ಲಿ ಪುಟ್ಟಾಣಿ ವಿದ್ಯಾರ್ಥಿಗಳು ವೈದ್ಯರ ವಸ್ತ್ರ ಧರಿಸಿ ಒಡನಾಡಿ ಸ್ನೇಹಿತರ ಆರೋಗ್ಯ ತಪಾಸಣೆ ಮಾಡುವುದರ ಮುಖಾಂತರ ಮೆಚ್ಚುಗೆಗೆ ಪಾತ್ರರಾದರು ಎಂದು ಹೇಳಿದರು.
ಶಾಲೆಯ ಸಂಸ್ಥಾಪಕರಾದ ಎಚ್.ವಿ.ಅಶ್ವಿನ್ ಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕವೃಂದ ಇದ್ದರು.