ಮಳವಳ್ಳಿ ಪಟ್ಟಣದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮವನ್ನು ಪಕ್ಷದ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಉದ್ಘಾಟಿಸಿದರು. ಮದ್ದೂರು ಸ್ವಾಮಿ , ಇಂಡವಾಳು ಸಚ್ಚಿದನಂದ, ಅಶೋಕ್,ನಾಗೇಗೌಡ, ಎಚ್.ಆರ್,ಅಶೋಕ್, ಯಮದೂರು ಇತರರು ಇದ್ದರು.  
ಮಂಡ್ಯ

ಸಂಘಟನೆಯಿಂದ ಪಕ್ಷದ ಬಲವರ್ಧನೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್ ಅಭಿಮತ
  • ತಾಲೂಕು ಮಂಡಲ ಅಧ್ಯಕ್ಷ ಪದಗ್ರಹಣ
ಮಳವಳ್ಳಿ : ಪಟ್ಟಣದ ಖಾಸಿಗಿ ಹೋಟೆಲ್ ನಲ್ಲಿ ಸೋಮವಾರ ಬಿಜೆಪಿ ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮ ನಡೆಯಿತು.
ನೂತನ ಮಂಡಲ ಅಧ್ಯಕ್ಷ ಮಧುಗಂಗಾಧರ್ ಅವರಿಗೆ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್ ಅವರು ಶುಭಕೋರಿದರು.
ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಜಿಲ್ಲೆಯಲ್ಲೇ ಅತಿ ಹೆಚ್ಚು ಬಿಜೆಪಿ ಪಕ್ಷ ಮತಗಳಿಸುವ ಕ್ಷೇತ್ರ ಮಳವಳ್ಳಿ ಯಾಗಿದ್ದು, ಪಕ್ಷ ಸಂಘಟನೆಯ ಬಲವರ್ಧನೆ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಈ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ವಿಧಾನಸೌಧಕ್ಕೆ ಕಳುಹಿಸಿಕೊಡಬೇಕೆಂದು ಸಲಹೆ ನೀಡಿದರು.
ಬಿಜೆಪಿ ಮುಖಂಡರಾದ ಮದ್ದೂರು ಸ್ವಾಮಿ ಹಾಗೂ ಇಂಡವಾಳು ಸಚ್ಚಿದನಂದ ಮತ್ತು ಅಶೋಕ್ ಜಯರಾಮ್ ಅವರು ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬುವ ಜತೆಗೆ ಒಗ್ಗೂಡಿ ಸಂಘಟನೆ ಮಾಡಲು ಶ್ರಮಿಸೋಣ ಎಂದರು.
ನೂತನ ಮಂಡಲ ಅಧ್ಯಕ್ಷ ಮಧುಗಂಗಾಧರ್ ಮಾತನಾಡಿ, ನನಗೆ ಕೊಟ್ಟಿರುವ ಜವಬ್ದಾರಿಯನ್ನು ನಿಷ್ಠೆಯಿಂದ ನಿಬಾಯಿಸಿಕೊಂಡು ತಾಲೂಕಿನ ಎಲ್ಲ ಮುಖಂಡರ ಸಲಹೆ ಸಹಕಾರ ಪಡೆದುಕೊಂಡು ಪಕ್ಷವನ್ನು ಮತ್ತಷ್ಟು ಬಲವಾಗಿ ಸಂಘಟನೆ ಮಾಡಿ ಕ್ಷೇತ್ರದಿಂದ ಶಾಸಕ ಸ್ಥಾನ ಗೆಲ್ಲಿಸಿ ಕಳುಹಿಸಲು ಶ್ರಮ ವಹಿಸುವುದಾಗಿ ಭರವಸೆ ನೀಡಿದರು.
ನಿಕಟ ಪೂರ್ವ ಅಧ್ಯಕ್ಷ ಕೃಷ್ಣ ನೂತನ ಅಧ್ಯಕ್ಷ ಮಧುಗಂಗಾಧರ್ ಅವರಿಗೆ ಪಕ್ಷದ ಬಾವುಟವನ್ನು ಹಸ್ತಾಂತರಿಸಿ ಅಧ್ಯಕ್ಷರ ಜವಾಬ್ದಾರಿಯನ್ನೂ ನೀಡಿದ್ದರು.
ಮುಖಂಡರಾದ ಸಿದ್ದರಾಮಯ್ಯ, ನಾಗೇಗೌಡ, ಎಚ್.ಆರ್. ಅಶೋಕ್, ಯಮದೂರು ಸಿದ್ದರಾಜು, ಬಸವರಾಜ್, ಕುಮಾರ್ ಸ್ವಾಮಿ, ಕುಮಾರ್ ಹಲಗೂರು, ಚಿಕ್ಕಣ್ಣ, ರವಿ, ಶಶಿಕುಮಾರ್, ಅಶೋಕ್ , ಶಿವಲಿಂಗಸ್ವಾಮಿ, ದೇವರಾಜ್, ಕೃಷ್ಣೇಗೌಡ, ನಿತ್ಯನಂದ, ಒಕ್ಕರಳ್ಳಿ ಬಸವರಾಜ್, ಮಹೇಶ್ ಕುಂದೂರು, ಹಲದಾಸಹಳ್ಳಿ ಶಿವಣ್ಣ, ಸಂಶೇಟ್ಟಿಪುರ ಸಿದ್ದರಾಜು, ರಾಮು, ಬೆಳಕವಾಡಿ ಕುಮಾರ್, ಮಹೇಶ್ ಮಳವಳ್ಳಿ ವೇಣು, ಜಗ್ಗಣ್ಣ, ಮಧು ಶಂಭು ಶೆಟ್ಟಿ ಪುರ, ಕಾಂತ,ಕನ್ನಹಳ್ಳಿ ಪ್ರಸಾದ್, ಲಿಂಗರಾಜು, ಪೂರಿಗಾಲಿ ಮಹದೇವಸ್ವಾಮಿ, ಮೋಹನ್, ಶಂಕರ್ ಚಂದಹಳ್ಳಿ ಇತರರು ಇದ್ದರು.