ಮಂಡ್ಯದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಉದ್ಘಾಟಿಸಿದರು. 
ಮಂಡ್ಯ

ಅವಲೋಕಿಸದೆ ಸಂಶೋಧನೆಗೆ ವಿಷಯ ಸಿಗಲ್ಲ: ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಮತ್ತು ಸವಾಲುಗಳು
  • ರಾಜ್ಯಮಟ್ಟದ ವಿಚಾರ ಸಂಕಿರಣ
  • ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ )ನಲ್ಲಿ ಆಯೋಜನೆ
ಮಂಡ್ಯ: ಯಾವುದೇ ವಿಷಯವಾಗಲಿ ಅವಲೋಕಿಸದೆ ಸೂಕ್ತ ಸಂಶೋಧನಾ ವಿಷಯ ದೊರೆಯುವುದಿಲ್ಲ ಎಂದು ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಅಭಿಪ್ರಾಯಿಸಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ )ನಲ್ಲಿ ಸ್ನಾತಕ, ಸ್ನಾತಕೋತ್ತರ ಕನ್ನಡ ವಿಭಾಗ ಮತ್ತು ಸಂಶೋಧನಾ ಕೇಂದ್ರ ರೂಸಾ 2.0 ಯೋಜನೆಯಡಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಮತ್ತು ಸವಾಲುಗಳ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಂಶೋಧನೆ ಮಾಡುವಲ್ಲಿ ಸಾಹಿತ್ಯಗಳ ಜವಾಬ್ದಾರಿ ದೊಡ್ಡದಿದೆ. ಮಂಡ್ಯ ವಿಶ್ವವಿದ್ಯಾಲಯದಲ್ಲಿ ಹೆಚ್ಚು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಕೆಲಸವಾಗಬೇಕಿದೆ. ಈಗಾಗಲೇ 5 ಸಂಶೋಧನೆ ಕೇಂದ್ರಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಬೆರೆಲ್ಲೋ ಹೋಗಿ ಸಂಶೋಧನೆ ಮಾಡುವ ಬದಲು ಇಲ್ಲಿಯೇ ಸಂಶೋಧನೆ ಮಾಡಬೇಕು ಎಂಬ ಉದ್ದೇಶದಿಂದ ಇಷ್ಟೆಲ್ಲಾ ಮಾಡಲಾಗುತ್ತಿದೆ ಎಂದರು.
ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವುದೆ ಸಂಶೋಧನೆ ಹಾಗಾಗಿ ಅಧ್ಯಾಪನ ಮತ್ತು ಅಧ್ಯಯನ ಸಂಶೋಧನೆಗೆ ಬಹಳ ಮುಖ್ಯವಾಗಿದೆ. ಗುಹೆಯಲ್ಲಿರುವ ಅಂಧಕಾರವನ್ನ ಹೋಗಲಾಡಿಸುವವನೆ ಗುರು. ಅಜ್ಞಾನದಿಂದ ಜ್ಞಾನದ ಬೆಳಕು ಚೆಲ್ಲುವವನು ಎಂದು ಅರ್ಥೈಸಿಕೊಳ್ಳಬಹುದು. ಹಾಗೆಯೇ ಎಲ್ಲೋ ಇರುವ ಸತ್ಯವನ್ನು ಹೊರ ತೆಗೆಯುವುದೆ ಸಂಶೋಧನೆ. ಸಾಮಾಜಿಕ ವಿಜ್ಞಾನದ ಸಂಶೋಧನೆಗೂ ಕನ್ನಡ ಸಾಹಿತ್ಯದ ಸಂಶೋಧನೆಗೆ ಬಹಳ ವ್ಯತ್ಯಾಸವಿದೆ ಆದರೆ ಅಂತಿಮ ಗುರಿ ಸಂಶೋಧನೆ ಎಂದು ಹೇಳಿದರು.
ಈಗಾಗಲೇ ಹಲವಾರು ಜ್ಞಾನಿಗಳು ವಿಜ್ಞಾನಿಗಳ ಶೋಧನೆ ಮಾಡಿರುವ ವಿಷಯದ ಕುರಿತು ಅಧ್ಯಯನ ಮಾಡುವುದೇ ಸಂಶೋಧನೆ ಅಸ್ಥಿತ್ವದಲ್ಲಿರುವ ಜ್ಞಾನದ ಹೊಸತನವನ್ನು ಹುಡುಕುವುದು. ಸಂಶೋಧನೆಯಲ್ಲಿ ಪ್ರಶ್ನೆಗಳಿಲ್ಲದೆ ಉತ್ತರ ಹುಡುಕುವುದು ಸಾಧ್ಯವಿಲ್ಲ. ಕನ್ನಡ ಸಾಹಿತ್ಯವನ್ನು ಅವಲೋಕಿಸಿದಾಗ ಮಾತ್ರ ಯಾವ ವಿಷಯದ ಮೇಲೆ ಸಂಶೋಧನೆ ಮಾಡಬಹುದು ಎಂದು ತಿಳಿಯುತ್ತದೆ. ಸಂಶೋಧನೆ ಯಾವಾಗಲೂ ಸಕಾರಾತ್ಮಕವಾಗಿರಲಿ. ಸಮಾಜಕ್ಕೆ ಸಂಶೋಧಕರ ಅಗತ್ಯವಿದೆ. ನೀವು ಮಾಡುವ ಸಂಶೋಧನೆ ಯಾವಾಗಲೂ ಗುಣಮಟ್ಟದಿಂದ ಕೂಡಿರಲಿ ಎಂದು ಹೇಳಿದರು.
ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ ) ಪ್ರಾಂಶುಪಾಲ ಪ್ರೊ.ಕೆ.ಗುರುರಾಜ್‌ಪ್ರಭು ಮಾತನಾಡಿ, ಸಂಶೋಧಕರಿಗೂ ಹಾಗೂ ಅಧ್ಯಾಪಕರಿಗೆ ಇಂತಹ ಕಾರ್ಯಕ್ರಮಗಳು ಅತಿ ಮುಖ್ಯವಾಗಿದೆ. ಸಂಶೋಧನೆ ಮನುಷ್ಯ ಮತ್ತು ವಸ್ತು ವಿಷಯಗಳ ನಡುವಿನ ನಿರಂತರವಾದ ಪ್ರಕ್ರಿಯೆ. ಸಂಶೋಧನೆ ಪ್ರತಿ ತಲೆಮಾರಿಗೂ ಅಗತ್ಯವಾಗಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿ.ಶಿವಕೀರ್ತಿ, ರೂಸ ಸಂಯೋಜಕಿ ಪ್ರೊ.ಕೆ.ಎಂ ಮಂಗಳಮ್ಮ, ಪ್ರೊ.ಕೆ.ವಿ.ಜ್ಯೋತಿ, ಕೆ.ಪಿ. ರವಿಕಿರಣ್, ವರದರಾಜ ಇತರರಿದ್ದರು.