ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ಗುರುವಾರ ಸಂಕ್ರಾಂತಿ ಪ್ರಯುಕ್ತ ಶ್ರೀರಾಮ ದೇವರಿಗೆ ಧನುರ್ಮಾದ ಪೂಜಾ ಕೈಂಕರ್ಯ ಸಂಪನ್ನಗೊಳಿಸಿ ಪ್ರಮುಖ ಬೀದಿಗಳಲ್ಲಿ ಶ್ರೀರಾಮೋತ್ಸವ ನೆರವೇರಿಸಲಾಯಿತು.
ಶ್ರೀರಂಗಪಟ್ಟಣ: ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ಗುರುವಾರ ಶ್ರೀರಾಮೋತ್ಸವ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಧನುರ್ಮಾಸ ಪ್ರಯುಕ್ತ ಶ್ರೀ ಸೀತಾರಾಮ, ಲಕ್ಷ್ಮಣ, ಹನುಮ ದೇವರಿಗೆ ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಸಂಪ್ರದಾಯದಂತೆ ಪೂಜೆಗಳೊಂದಿಗೆ ಭಜನೆಯನ್ನು ಅರ್ಪಿಸಿದರು. ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಪಂಚಲೋಹದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರಿಗೆ ಪ್ರಸಾದ ವಿನಿಯೋಗಿಸಿದರು.
ಗ್ರಾಮದ ಯಜಮಾನ ಚಂದ್ರು, ಬೋರಯ್ಯ, ಭೂತಯ್ಯ, ವಿನಯ್, ಶರತ್ ಇತರರು ಇದ್ದರು.