ವಿವಿಧ ಪೂಜಾ ಮಹೋತ್ಸವ  
ಮಂಡ್ಯ

ಶ್ರೀರಾಮನವಮಿ ಪೂಜಾ ಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • ಅಣ್ಣೂರು ಗ್ರಾಮದ ಶ್ರೀರಾಮ ಸೇವಾ ಸಮಿತಿ
  • ಶ್ರೀರಾಮನವಮಿ ಪ್ರಯುಕ್ತ ಮಾ.27ರಂದು ವಿವಿಧ ಪೂಜಾ ಮಹೋತ್ಸವ
ಕೆ.ಎಂ.ದೊಡ್ಡಿ: ಸಮೀಪದ ಅಣ್ಣೂರು ಗ್ರಾಮದ ಶ್ರೀರಾಮ ಸೇವಾ ಸಮಿತಿಯಿಂದ ಶ್ರೀರಾಮನವಮಿ ಪ್ರಯುಕ್ತ ಮಾ.27ರಂದು ವಿವಿಧ ಪೂಜಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಮನ್ಮುಲ್ ಮಾಜಿ ನಿರ್ದೇಶಕ, ಸಮಿತಿಯ ಸಂಚಾಲಕ ಎ.ಸಿ.ಸತೀಶ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ ಶ್ರೀರಾಮನಿಗೆ ವಿವಿಧ ರೀತಿಯ ಪುಷ್ಪಲಂಕಾರ ನೆರವೇರಲಿದ್ದು ಪಾನಕ, ಮಜ್ಜಿಗೆ, ಕೊಸಂಬರಿ ವಿತರಣೆ ಮಾಡಲಾಗುತ್ತದೆ. ಸಂಜೆ 6 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದ ವಿಶ್ವವಿಜೇತ ಸ್ವಾಮಿ ವಿವೇಕಾನಂದ ಯುವಬಳಗ ಶ್ರೀಮದ್ ರಾಮಾಯಣ ಮೌಲ್ಯದರ್ಶನ ಮತ್ತು ಶ್ರೀರಾಮನ ಗೀತ ಪ್ರವಚನ ಮತ್ತು ನಮನ ವಿನೂತನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಾ.27ರಿಂದ ಮಾ.31ರವರೆಗೆ ಪ್ರತಿ ದಿನ ಶ್ರೀರಾಮನಿಗೆ ವಿವಿಧ ಪೂಜಾ ಕೈಂಕರ್ಯ ನೆರವೇರಲಿದ್ದು, ಪ್ರಸಾದ ವಿನಿಯೋಗ ಇರಲಿದೆ. ಮಾ.31 ರಂದು ಶ್ರೀರಾಮನ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರತಿ ಬೀದಿಯಲ್ಲೂ ಮೆರವಣಿಗೆ ಮಾಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.