ಶ್ರೀ ರಾಮನವಮಿ ಅಂಗವಾಗಿ ನಗರದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ದೇಗುಲದಲ್ಲಿ ರಾಮ, ಲಕ್ಷ್ಮಣ, ಸೀತೆ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಇದ್ದರು. 
ಮಂಡ್ಯ

ಮದ್ದೂರಿನಲ್ಲಿ ಶ್ರೀ ರಾಮನಾಮ ಸ್ಮರಣೆ

ಶಿವಶಂಕರ್ ಎಂ. ಹೆಬ್ಬಳ್ಳ
ಮದ್ದೂರು: ಶ್ರೀ ರಾಮನವಮಿ ಅಂಗವಾಗಿ ನಗರ ಸೇರಿದಂತೆ ತಾಲೂಕಿನಾದ್ಯಂತ ಶ್ರೀರಾಮನ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಶುಕ್ರವಾರ ಹಮ್ಮಿಕೊಂಡು ಶ್ರೀ ರಾಮನಾಮ ಸ್ಮರಣೆ ಮಾಡಲಾಯಿತು.
ನಗರದ ಪುರಾಣ ಪ್ರಸಿದ್ಧ ಶ್ರೀ ಪಟ್ಟಾಭಿರಾಮ, ಪೇಟೆಬೀದಿಯಲ್ಲಿರುವ ಶ್ರೀ ಆಂಜನೇಯ, ರಾಮಮಂದಿರ ಪಾರ್ಕ್‌ನಲ್ಲಿರುವ ರಾಮ ಮಂದಿರ ಸೇರಿದಂತೆ ವಿವಿಧ ದೇಗುಲಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರಿಗೆ ಮಜ್ಜಿಗೆ, ಪಾನಕ ಹೆಸರು ಬೇಳೆ ಕೋಸಂಬ್ರಿ ವಿತರಿಸಲಾಯಿತು.
ರಾಮಮಂದಿರ ಪಾರ್ಕ್‌ನಲ್ಲಿರುವ ರಾಮಮಂದಿರ ಆವರಣದಲ್ಲಿ ಶ್ರೀ ರಾಮ ಯುವಕರ ಬಳಗ ಹಾಗೂ ಸ್ಥಳಿಯ ವ್ಯಾಪಾರಿಗಳಿಂದ ೆ ಭಕ್ತರಿಗೆ ಮಜ್ಜಿಗೆ, ಹೆಸರು ಬೇಳೆ ಹಾಗೂ ಪಾನಕ ವಿತರಿಸಲಾಯಿತು.