ಕೆ.ಆರ್.ಸಾಗರ ಗ್ರಾಮದಲ್ಲಿ ಮಂಗಳವಾರ ಗ್ರಾಮ ದೇವತೆ ಶ್ರೀ ಮರುಗಮ್ಮ ದೇವರ ಹಬ್ಬದ ಪ್ರಮುಕ್ತ ವಿವಿಧ ರಸ್ತೆಗಳಲ್ಲಿ ತಂಬಿಟ್ಟಿನಾರತಿ ಮೆರವಣಿಗೆ ನಡೆಯಿತು.
ಕೆ.ಆರ್.ಸಾಗರ: ಗ್ರಾಮದಲ್ಲಿ ಮಂಗಳವಾರ ಗ್ರಾಮ ದೇವತೆ ಶ್ರೀ ಮರುಗಮ್ಮ ದೇವರ ಹಬ್ಬ ವಿಜೃಂಭಣೆಯಿಂದ ಜರುಗಿತು.
ಅರ್ಚಕ ಗಣೇಶ್ ಮತ್ತು ಮರಿಯಪ್ಪ ನೇತೃತ್ವದಲ್ಲಿ ಬೆಳಗ್ಗೆ ಮರುಗಮ್ಮ ದೇವರ ಉತ್ಸವ ಮೂರ್ತಿಯನ್ನು ಕಾವೇರಿ ನದಿಯಲ್ಲಿ ಶುದ್ಧೀಕರಿಸಿ, ಪೂಜೆ ಸಲ್ಲಿಸಲಾಯಿತು. ಕಳಸ ಹೊತ್ತ ಮಹಿಳೆಯರ ಜತೆ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಮಟೆ, ನಗಾರಿ, ಬ್ಯಾಂಡ್‌ಸೆಟ್‌ನೊಂದಿಗೆ ಮೆರವಣೆಗೆ ನಡೆಸಲಾಯಿತು. ತಂಬಿಟ್ಟಿನಾರತಿ ಹೊತ್ತ ಮಹಿಳೆಯರು, ಮಕ್ಕಳು ಗ್ರಾಮದ ಮುಖ್ಯ ದ್ವಾರದಲ್ಲಿರುವ ಶ್ರೀ ಮರುಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಮಹಾಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು.