ಅಲಭುಜನಹಳ್ಳಿ ಶ್ರೀ ಕಂಚಿನ ಮಾರಮ್ಮ ದೇವಿ
ಕೆ.ಎಂ.ದೊಡ್ಡಿ: ಸಮೀಪದ ಅಲಭುಜನಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಕಂಚಿನ ಮಾರಮ್ಮ ದೇವಿಯ ಪೂಜಾ ಮಹೋತ್ಸವ ಮತ್ತು ಕೊಂಡೋತ್ಸವ ಫೆ.23ರಿಂದ 26ರ ವರೆಗೂ ನಡೆಯಲಿದೆ.
ಹಬ್ಬದ ಪೂರ್ವಬಾವಿಯಾಗಿ ಶ್ರೀ ಕಂಚಿನ ಮಾರಮ್ಮ ದೇವಿಗೆ ಕಂಬ ಹಾಕಲಾಗಿದ್ದು, ಮಾರಮ್ಮ ಹಬ್ಬಕ್ಕೆ ಗ್ರಾಮ ಸಜ್ಜಾಗಿದೆ.
ಫೆ. 23 ರ ಸೋಮವಾರ ಸಂಜೆ ಶ್ರೀ ಬಸವೇಶ್ವರ ಸ್ವಾಮಿ ಕೊಂಡ ಬಂಡಿ ಉತ್ಸವ ಫೆ. 24 ಮಂಗಳವಾರ ಬೆಳಗ್ಗೆ 6ಗಂಟೆಗೆ ಶ್ರೀ ಬಸವೇಶ್ವರ ಸ್ವಾಮಿ ಕೊಂಡೋತ್ಸವ ಮತ್ತು ಗ್ರಾಮದಲ್ಲಿ ಮೆರವಣಿಗೆ ಉತ್ಸವ ಜರುಗಲಿದೆ.
ಫೆ.25 ಬುಧವಾರ ಸಂಜೆ 6 ಗಂಟೆಗೆ ಶ್ರೀ ಕಂಚಿನ ಮಾರಮ್ಮ ದೇವಿಯ ಕೊಂಡ ಬಂಡಿ ಉತ್ಸವ ಫೆ 26 ರಂದು ಗುರುವಾರ ಶ್ರೀ ವೀರಮಸ್ತಿ ಕೆಂಪಮ್ಮನವರ ಕರಗ ಉತ್ಸವ ಸಂಜೆ 4 ಗಂಟೆಗೆ ಶ್ರೀ ಕಂಚಿನ ಮಾರಮ್ಮನವರ ಹೂ ಹೊಂಬಾಳೆ ಮತ್ತು ಬಾಯಿಬೀಗ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ಕಂಚಿನ ಮಾರಮ್ಮನವರ ಕೊಂಡೋತ್ಸವ ಮತ್ತು ಮೆರವಣಿಗೆ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.
ಫೆ.26 ರಂದು ರಾತ್ರಿ 8:30ಕ್ಕೆ ಆಲಭುಜನಹಳ್ಳಿ ಯುವಕ ಮಿತ್ರರಿಂದ ಮಾಂಗಲ್ಯ ಭಾಗ್ಯ ಎಂಬ ಸಾಮಾಜಿಕ ನಾಟಕವನ್ನು ಏರ್ಪಡಿಸಲಾಗಿದೆ ಎಂದು ಗ್ರಾಮಸ್ಥರು ಪ್ರಕಟಣೆ ತಿಳಿಸಿದ್ದಾರೆ.