ಕಿಕ್ಕೇರಿ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕನ್ನಂಬಾಡಮ್ಮ ದೇಗುಲ ಅಭಿವೃದ್ಧಿಗಾಗಿ ಆರ್‌ಟಿಒ ಮಲ್ಲಿಕಾರ್ಜುನ ಶನಿವಾರ ಆರ್ಥಿಕ ನೆರವು ನೀಡಿದರು. ಕೆಂಗಯ್ಯ, ಬಸಪ್ಪ, ಬಸವಯ್ಯ, ಶಂಕರಯ್ಯ ಇದ್ದರು.  
ಮಂಡ್ಯ

ತಂತ್ರಜ್ಞಾನ ಯುಗದಲ್ಲಿ ಅಧ್ಯಾತ್ಮ ಜೀವಂತ

ಕಿಕ್ಕೇರಿ: ತಂತ್ರಜ್ಞಾನ ಯುಗದಲ್ಲಿಯೂ ಅಧ್ಯಾತ್ಮ ಎಂಬುದು ಜೀವಂತವಾಗಿದೆ ಎಂದರೆ ಅದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ತಿಳಿಸಿದರು.
ಹೋಬಳಿಯ ಲಿಂಗಾಪುರ ಗ್ರಾಮದೇವತೆ ಕನ್ನಂಬಾಡಮ್ಮ ನೂತನ ದೇಗುಲ ನಿರ್ಮಾಣಕ್ಕೆ ಶನಿವಾರ ಆರ್ಥಿಕ ಸಹಾಯ ಮಾಡಿ ಮಾತನಾಡಿದರು. ಗ್ರಾಮೀಣ ಜನರು ದೇಗುಲಗಳ ಮೂಲಕ ನೆಮ್ಮದಿ ಕಂಡುಕೊಂಡಿದ್ದಾರೆ. ಈ ಗ್ರಾಮದಲ್ಲಿ ಮನೆಕೆಲಸ ಬಿಟ್ಟು ಸ್ವಂತ ಕೆಲಸದಂತೆ ಸುಂದರ ದೇಗುಲ ನಿರ್ಮಾಣಕ್ಕೆ ಕಾರಣವಾಗಿರುವ ಗ್ರಾಮಸ್ಥರು ಮಾದರಿಯಾಗಿದ್ದಾರೆ ಎಂದರು.
ಗ್ರಾಮಸ್ಥರು ಧಾರ್ಮಿಕ ಚಿಂತನೆಗಳ ಜತೆ ಗ್ರಾಮಾಭಿವೃದ್ಧಿಗೆ ಮುಂದಾಗಬೇಕು. ಚಿಂತನಾಶೀಲ ಬದುಕು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿದರೆ ಬದುಕಿನಲ್ಲಿ ಸಾರ್ಥಕ್ಯ ಅರ್ಥ ಕಾಣಬಹುದು ಎಂದು ನುಡಿದರು.
ಇತ್ತೀಚೆಗೆ ಇದೇ ಗ್ರಾಮದಲ್ಲಿ ಕೆರೆಗೆ ಕಾಲುಜಾರಿ ಮೃತಪಟ್ಟ ಯುವಕ ಅರುಣಕುಮಾರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಮಾನವೀಯತೆ ಮೆರೆದರು.
ಮುಖಂಡರಾದ ಕೆಂಗಯ್ಯ, ಬಸಪ್ಪ, ಬಸವಯ್ಯ, ಶಂಕರಯ್ಯ, ಸುಖೇಂದ್ರ, ಪುಟ್ಟರಾಜು, ಮಹಾದೇವ, ಸ್ವಾಮಿ, ನಿಂಗರಾಜು, ಶಿವರಾಜು, ಸಣ್ಣಯ್ಯ, ಪಾಪಯ್ಯ, ದೊಡಣ್ಣ, ಗಂಜಿಗೆರೆ ಮಹೇಶ್ ಇತರರು ಇದ್ದರು.