ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದ ಕಾಳಿಂಗ ಮರ್ಧನ ಗೋಪಾಲ ಕೃಷ್ಣ ದೇಗುಲದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮದ್ದೂರು: ತಾಲೂಕಿನ ಯರಗನಹಳ್ಳಿ ಗ್ರಾಮದ ಕಾಳಿಂಗ ಮರ್ಧನ ಗೋಪಾಲ ಕೃಷ್ಣ ದೇಗುಲದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆಯಿಂದಲೇ ದೇಗುಲದಲ್ಲಿ ಮಹಾ ಅಭಿಷೇಕ, ಮಹಾ ಮಂಗಳಾರತಿ, ಸುಪ್ರಭಾತ ಸೇವೆ, ದೇವರಿಗೆ ಗುರುಡೋತ್ಸವ ಅಲಂಕಾರ, ಶಾತ್ತು ಮೊರೈ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳಿಗೆ ತಿರ್ಥ, ಪ್ರಸಾದ ವಿತರಣೆ ಮಾಡಲಾಯಿತು.
ಪೂಜೆಯ ಆಯೋಜಕರಾದ ಗ್ರಾಮದ ಮುಖಂಡ ರಾಮಚಂದ್ರು ಮಾತನಾಡಿ, ಗ್ರಾಮದ ಕಾಳಿಂಗ ಮರ್ಧನ ಗೋಪಾಲ ಕೃಷ್ಣ ದೇಗುಲ ಪುರಾತನ ದೇಗುಲವಾಗಿದ್ದು, ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ. ಆದ್ದರಿಂದ ಸ್ವಾಮಿಗೆ ಅಸಂಖ್ಯಾಂತ ಭಕ್ತ ವೃಂದವೇ ಇದೆ ಎಂದರು.
ದೇಗುಲದ ಅರ್ಚಕ ಲಕ್ಷ್ಮೀಪ್ರಸನ್ನ, ಮಖಂಡರಾದ ಬಿ.ರಾಮಚಂದ್ರ, ವೈ.ಆರ್. ಸಚಿನ್, ದರ್ಶನ್, ಪ್ರತಾಪ್ ಇತರರಿದ್ದರು.