ವೈಕುಂಠ ಏಕಾದಶಿ ಅಂಗವಾಗಿ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷವಾಗಿ ಅಲಂಕಾರ ಮಾಡಿರುವುದು. 
ಮಂಡ್ಯ

ಬೆಸಗರಹಳ್ಳಿ ಗ್ರಾಮದಲ್ಲಿ ವಿಶೇಷ ಪೂಜೆ

ಮದ್ದೂರು: ವೈಕುಂಠ ಏಕಾದಶಿಯ ಪ್ರಯುಕ್ತ ಬೆಸಗರಹಳ್ಳಿ ಗ್ರಾಮದ ಶ್ರೀ ರಾಮ ಮಂದಿರ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗಿನ ಜಾವ 5 ಗಂಟೆಯಿಂದಲೇ ವೈಕುಂಠ ದ್ವಾರದ ಪ್ರವೇಶ ಹಾಗೂ ದೇವರ ದರ್ಶನ ಮಾಡಿ ಭಕ್ತರು ಪುನೀತರಾದರು. ದೇವಸ್ಥಾನದ ಅರ್ಚಕ ಮದನ್ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಬೆಸಗರಹಳ್ಳಿ ಗ್ರಾಮದ ಶ್ರೀ ವೆಂಕಟೇಶ್ವರ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಹಾಗೂ ಹೋಮ-ಹವನಗಳು ನಡೆಯಿತು.
ಭಕ್ತಾದಿಗಳು ಬೆಳಗಿನ ಜಾವ 4 ಗಂಟೆಯಿಂದಲೇ ವೈಕುಂಠ ದ್ವಾರದ ಪ್ರವೇಶ ಹಾಗೂ ದೇವರ ದರ್ಶನ ಪಡೆದರು.
ಅರ್ಚಕರಾದ ಗೋವಿಂದ ಹಾಗೂ ವೆಂಕಟೇಶ್ ಪೂಜಾ ಕಾರ್ಯಕ್ರಮದ ನೇತೃತ್ವವಹಿಸಿದ್ದರು.