ಮದ್ದೂರು ನಗರದ ಕೋಟೆ ಬೀದಿಯಲ್ಲಿರುವ ಕೋಟೆ ಮಾರಮ್ಮ ದೇಗುಲದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. 
ಮಂಡ್ಯ

ಕೋಟೆ ಮಾರಮ್ಮ ದೇಗುಲದಲ್ಲಿ ವಿಶೇಷ ಪೂಜೆ

ಮದ್ದೂರು: ನಗರದ ಕೋಟೆ ಬೀದಿಯಲ್ಲಿರುವ ಕೋಟೆ ಮಾರಮ್ಮ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆಯಿಂದಲೇ ದೇಗುದಲ್ಲಿ ಹೋಮ, ಹವನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿದರೆ ಮಕ್ಕಳಿಗೆ ಯಾವುದೇ ರೀತಿಯ ರೋಗ-ರುಜಿನಗಳು ಬರುವುದಿಲ್ಲ ಎಂಬುದು ಭಕ್ತಾದಿಗಳ ನಂಬಿಕೆಯಾಗಿದ್ದು, ಮಹಿಳೆಯರು ಮಕ್ಕಳ ಸಮೇತ ದೇಗುಲಕ್ಕೆ ಆಗಮಿಸಿ ಮಾರಮ್ಮನಿಗೆ ಎಳನೀರು, ಮೊಸರನ್ನ, ಬೇವಿನ ಸೊಪ್ಪು ನೀಡಿ ತಂಬಿಟ್ಟಿನಾರತಿ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಆಗಮಿಸಿದ ಭಕ್ತಾದಿಗಳಿಗೆ, ಕೋಟೆ ಮಾರಮ್ಮ ಸೇವಾ ಟ್ರಸ್ಟ್ ವತಿಯಿಂದ ಬೆಳಗ್ಗೆಯಿಂದ ಸಂಜೆಯರೆಗೆ ಪ್ರಸಾದ ವಿತರಣೆ ಮಾಡಲಾಯಿತು. ಪ್ರಧಾನ ಅರ್ಚಕ ಕುಮಾರ್ ಅವರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಟ್ರಸ್ಟ್ ಅಧ್ಯಕ್ಷ ಆಟೋ ಕೃಷ್ಣ, ಕಾರ್ಯದರ್ಶಿ ಎಂ.ವಿ.ಸತ್ಯನಾರಾಯಣ್ ರಾವ್, ಉಪಾಧ್ಯಕ್ಷ ಎಂ.ಸಿ.ರಮೇಶ್, ಖಜಾಂಚಿ ಶ್ರೀಕಂಠಯ್ಯ ಸೇರಿದಂತೆ ಇತರರು ಇದ್ದರು.