ಶ್ರೀಸಣ್ಣಕ್ಕಿರಾಯ ಸ್ವಾಮಿ ದೇವರ ಮೂರ್ತಿ
- Sompur Sannakkiraya temple
ಮದ್ದೂರು: ತಾಲೂಕಿನ ಸೋಂಪುರ ಗ್ರಾಮ ಸಣ್ಣಕ್ಕಿರಾಯ ಸ್ವಾಮಿ ದೇವಸ್ಥಾನದಲ್ಲಿ ದೊಡ್ಡರಸಿನಕೆರೆ ಶ್ರೀಸಣ್ಣಕ್ಕಿರಾಯ ಸ್ವಾಮಿ ಬಸವಪ್ಪನ ಸಾನ್ನಿಧ್ಯದಲ್ಲಿ ನೂತನ ದೇವಾಲಯದ 48ನೇ ದಿನದ ಪೂಜಾ ಮಹೋತ್ಸವ ಏರ್ಪಡಿಸಲಾಗಿದೆ. ಜು. 1ರಂದು ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಬೆಳಗ್ಗೆ 10 ಗಂಟೆಯಿಂದಲೇ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸೋಂಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇಗುಲದ ಅರ್ಚಕ ಸತ್ಯ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.