ಮೇಲುಕೋಟೆ ಯೋಗನರಸಿಂಹಸ್ವಾಮಿ ಬೆಟ್ಟದ ದೇಗುಲದಲ್ಲಿ ರಾಮಾನುಜದ ಸನ್ನಿಧಿ ಅರ್ಚಕ ಆನಂದಾಳ್ವರ್ ಪೂಜೆ ಸಲ್ಲಿಸಿದರು. 
ಮಂಡ್ಯ

ಅರ್ಚಕ ಸೇರಿ ಆರು ಮಂದಿ ಅಮಾನತು

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಯೋಗನರಸಿಂಹಸ್ವಾಮಿ ಬೆಟ್ಟದಲ್ಲಿ ಚಿನ್ನ, ಬೆಳ್ಳಿ ನಗದು ಕಳ್ಳತನ ಪ್ರಕರಣ
ಮೇಲುಕೋಟೆ: ಪ್ರಖ್ಯಾತ ಯೋಗನರಸಿಂಹಸ್ವಾಮಿ ಬೆಟ್ಟದ ಅರ್ಚಕ ಎಸ್.ನಾರಾಯಣಭಟ್ಟ ಸೇರಿದಂತೆ ಎಫ್‌ಐಆರ್ ದಾಖಲಾಗಿದ್ದ 6 ಮಂದಿಯನ್ನು ಮಂಡ್ಯ ಜಿಲ್ಲಾಧಿಕಾರಿ ಗುರುವಾರ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಅರ್ಚಕ ನಾರಾಯಣಭಟ್ಟರ್ ಸೇರಿದಂತೆ 6 ಮಂದಿ ವಿರುದ್ಧ ಚೆಲುವನಾರಾಯಣಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ನೀಡಿದ ದೂರಿನನ್ವಯ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಆರೋಪ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ದೇವಾಲಯದ ವ್ಯವಸ್ಥಾಪನಾ ಸಮಿತಿ ಜೂ.16ರಂದು ತುರ್ತು ಸಭೆ ಸೇರಿ ಅರ್ಚಕ ನಾರಾಯಣಭಟ್ಟ, ಪಾರುತ್ತೇಗಾರ್ ಶ್ರೀಧರ, ಪರಿಚಾರಕ ತಿರುವೇಂಗಡಾಚಾರ್, ಕಾವಲುಗಾರ ಎಂ.ಬಿ ಗಂಗಾಧರ, ಬಸವರಾಜು, ಮಣೇಗಾರ್ ಕಸ್ತೂರಿ ಶ್ರೀನಿವಾಸನ್ ಅವರನ್ನು ಧಾರ್ಮಿಕ ದತ್ತಿ ಕಾಯ್ದೆಯ ನಿಯಮಾವಳಿಯಂತೆ ಅಮಾನತುಗೊಳಿಸಿ ತೆರವಾದ ಹುದ್ದೆಗಳಿಗೆ ಬದಲಿ ವ್ಯವಸ್ಥೆ ಮಾಡಿ ಇಲಾಖೆ ತನಿಖೆ ನಡೆಸಬಹುದೆಂದು ಶಿಫಾರಸ್ಸು ಮಾಡಿತ್ತು. ಒಂದೇ ದಿನದಲ್ಲಿ ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಕುಮಾರ್ ಅಮಾನತು ಆದೇಶ ನೀಡಿದ್ದು, ಜತೆಗೆ ಬದಲಿ ವ್ಯವಸ್ಥೆ ಮಾಡಿದ್ದಾರೆ.