ಶ್ರೀರಂಗಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್‌ಐಆರ್ ಸಂಬಂಧ ಬಿಎಲ್‌ಎ 2 ಸಭೆ ಹಾಗೂ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿದರು. ಕೆ.ಎಸ್.ನಂಜುಂಡೇಗೌಡ, ರಾಶಿ ಸಿದ್ದರಾಜುಗೌಡ, ಪ್ರಭಾಕರ್ ಗುಪ್ತಾ ಇತರರು ಇದ್ದರು.
ಸಾರ್ವಜನಿಕ ಭಾಷಣಗಳಲ್ಲಿ ಮಹಿಳೆಯರಿಗೆ ಅನುಕುಂಪ ತೋರಿಸುವುದು, ವಾಸ್ತವದಲ್ಲಿ ರಾಜಕೀಯವಾಗಿ ಸ್ಥಾನಮಾನ ನೀಡದೆ ಕಡೆಗಣಿಸುವುದು ಕಾಂಗ್ರೆಸ್ ಜಾಯಮಾನವಾಗಿದೆ. ರಾಜ್ಯ ಸರ್ಕಾರದ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್‌ಐಆರ್ ಸಭೆ ಹಾಗೂ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಮಾತನಾಡಿ, ನೀಟ್ ವಿಚಾರದಲ್ಲಿ ಅಕ್ರಮ ನಡೆದಿರುವುದು ಸತ್ಯ, ಅದರಲ್ಲಿ ಭಾಗಿಯಾಗಿದ್ದವರನ್ನು ಶಿಕ್ಷೆಗೆ ಒಳಪಡಿಸುವ ಕಾರ್ಯವಾಗಿದೆ. ಜತೆಗೆ ಇದರ ಜವಾಬ್ದಾರಿಯ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು ಸತ್ಯ. ಆದರೆ, ಈ ವಿಚಾರಕ್ಕೆ ಪ್ರತಿಭಟನೆ ಪ್ರಾರಂಭಿಸಿದ ಸಿಜೆಪಿ ನಡೆಯನ್ನು ಕಾಂಗ್ರೆಸ್ ಸ್ವಾರ್ಥಕ್ಕೆ ಬಳಸಿಕೊಂಡು ಹೋರಾಟದ ದಿಕ್ಕನ್ನೇ ಬದಲಿಸಿದೆ. ಸದಾ ಮಹಿಳೆಯರ ಸಬಲೀಕರಣ ಹಾಗೂ ಆದ್ಯತೆ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ಮಹಿಳೆಯರಿಗೆ ರಾಜಕೀಯವಾಗಿ ಸ್ಥಾನಮಾನ ನೀಡದೆ ಕಡೆಗಣಿಸುವುದು ಪರಂಪರಗತವಾಗಿ ನಡೆದು ಬಂದಿದೆ ಎಂದು ಬೇಸರಿಸಿದರು.
ಬಿಜೆಪಿ ರೈತ ಮೋರ್ಚಾ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಭಾರತೀಯರು ಮತಪಟ್ಟಿಯಿಂದ ಕೈ ಜಾರದಂತೆ ಕ್ರಮಕೈಗೊಳ್ಳಲು ಭಾರತ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆಯನ್ನು ಎಇನ್ನು 10 ದಿನಗಳ ಕಾಲ ವಿಸ್ತರಿಸಿದ್ದು, ಕ್ಷೇತ್ರದಲ್ಲಿ ಗೈರು ಹಾಜರಿ 1453 ಜನ, ಸ್ಥಳಾಂತರ ಹೊಂದಿದವರು 11,815, ಮರಣ ಹೊಂದಿದವರು 5564 ಹಾಗೂ ಎರೆಡೆರಡು ಕಡೆ ಮತದಾನ ಹೊಂದಿದವರು 2530 ಇದ್ದು, ನಮ್ಮ ಪಕ್ಷದ ಬಿಎಲ್‌ಎಗಳು ಎಸ್‌ಐಆರ್ ಪ್ರಕ್ರಿಯೆ ನಡೆಸುವ ಪ್ರತಿನಿಧಿಗಳೊಂದಿಗೆ ಸಹಕರಿಸಿ ಪಟ್ಟಿಯಿಂದ ಮತದಾರರು ಕೈಬಿಟ್ಟು ಹೋಗದಂತೆ ಎಚ್ಚರವಹಿಸುವಂತೆ ಸಲಹೆ ನೀಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಶಿ ಸಿದ್ದರಾಜುಗೌಡ, ಬಿಎಲ್‌ಎ1 ಪ್ರಭಾಕರ್ ಗುಪ್ತಾ, ಹಿಂದುಳಿದ ಮೋರ್ಚಾ ತಾಲೂಕು ಅಧ್ಯಕ್ಷ ಯತಿರಾಜು, ಮುಖಂಡರಾದ ಹನಿಯಂಬಾಡಿ ಸತೀಶ್, ಬಲ್ಲೇನಹಳ್ಳಿ ಸಂತೋಷ್, ಅರಕೆರೆ ಪ್ರಶಾಂತ್, ಸಂಜೀವ್ ಪ್ರಶಾಂತ್, ಸಚಿನ್ ಕೊಡಿಯಾಲ, ಕಿರಣ್ ಕುಮಾರ್ ಸಿಂಗ್, ಹೇಮಂತ್ ಕುಮಾರ್ ಮಹಿಳಾ ಮೋರ್ಚಾದ ಮಾನಸ ಬ್ರಹ್ಮಪುರ, ಪಾಲಹಳ್ಳಿ ಗಾಯಿತ್ರಿ ದೇವಿರಮ್ಮ ಇದ್ದರು.