ಗುಳಗಟ್ಟ ಗ್ರಾಮದ ಜಿ.ಶಿವರುದ್ರ (58) ಮೃತ. 
ಮಂಡ್ಯ

ಗುಳಗಟ್ಟದ ಶಿವರುದ್ರ ಶವವಾಗಿ ಪತ್ತೆ

ನಾಗೇಶ ಎಸ್
ಮಳವಳ್ಳಿ: ತಾಲೂಕಿನ ಗುಳಗಟ್ಟ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗ್ರಾಮದ ಜಿ.ಶಿವರುದ್ರ (58) ಮೃತ. ಎಂದಿನಂತೆ ಶುಕ್ರವಾರ ಜಮೀನಿನ ಬಳಿ ವಾಕಿಂಗ್‌ಗೆ ಹೋಗಿದ್ದು, ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಜಮೀನಿನ ಬಳಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶನಿವಾರ ಬೆಳಗಿನ ಜಾವ ಸ್ಕೂಟರ್ ಸಮೇತ ಹಳ್ಳದಲ್ಲಿ ಶಿವರುದ್ರ ಅವರ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಗ್ರಾಮಾಂತರ ಇನ್‌ಸ್ಪೆಕ್ಟರ್ ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮೃತನ ಪುತ್ರ ಡಾ.ವಿನಯ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಿದ್ಯುತ್ ಪರಿವರ್ತಕದ ವಿಚಾರದಲ್ಲಿ ಪಕ್ಕದ ಜಮೀನಿನರೊಂದಿಗೆ ಜಗಳ ನಡೆದಿದ್ದ ಬಗ್ಗೆ ಉಲ್ಲೇಖಿಸಿದ್ದು, ಈ ವೈಷಮ್ಯದ ಹಿನ್ನೆಲೆಯಲ್ಲಿ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ.
25 ಎಂಎಲ್‌ವಿ 1
ಜಿ.ಶಿವರುದ್ರ(58)