ಮಳವಳ್ಳಿ ತಾಲೂಕಿನ ಚಂದಳ್ಳಿ ಗ್ರಾಮದ ಮಹೇಶ್ ಎಂಬುವರ ಮನೆಯಲ್ಲಿ ಕಳ್ಳತನ ವಾಗಿರುವ ಬಗ್ಗೆ ಮಹಜರು ನಡೆಸುವುದರ ಜತೆಗೆ ಮಾಹಿತಿಯನ್ನು ಬುಧವಾರ ಪೊಲೀಸರು ಪಡೆದುಕೊಂಡರು.
ಮಳವಳ್ಳಿ: ತಾಲೂಕಿನ ಚಂದಳ್ಳಿ ಮತ್ತು ದೊಡ್ಡಬೂಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.
ಚಂದಳ್ಳಿ ಗ್ರಾಮದ ಮಹೇಶ ಎಂಬುವರ ಮನೆ ಬಾಗಿಲ ಬೀಗವನ್ನು ಕಬ್ಬಿಣದ ರಾಡ್ ಬಳಸಿ ತೆರೆಯಲಾಗಿದ್ದು, ಮನೆಯ ಕೋಣೆಯಲ್ಲಿದ್ದ ಬೀರು ಲಾಕರ್ ಬೀಗ ಒಡೆದು 132 ಗ್ರಾಂ ವಿವಿಧ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ದೋಚಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಮಹಜರು ಮಾಡುವುದರ ಜತೆಗೆ ಬೆರಳಚ್ಚು ಮತ್ತು ಶ್ವಾನದಳ ಸಿಬ್ಬಂದಿ ಕರೆಸಿ ತನಿಖೆ ನಡೆಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ದೊಡ್ಡಬೂಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿದ್ದು, ವಸಂತಮ್ಮ ಎಂಬುವರ ಮನೆಯಲ್ಲಿ 1 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿದ್ದು, ಇದೇ ಗ್ರಾಮದ ಸುಬ್ಬಯ್ಯ ಎಂಬುವರ ಮನೆಯಲ್ಲಿದ್ದ ಸೂಟ್‌ಕೇಸ್ ಎತ್ತೊಯ್ದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಗ್ರಾಮದ ಹೊರವಲಯದ ಹೆಬ್ಬಳದ ಅರಸಮ್ಮ ದೇವಸ್ಥಾನದ ಬಳಿ ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ. ಕಳ್ಳತನ ನಡೆದಿರುವ ಎರಡೂ ಮನೆಗಳಿಗೆ ಬೆಳಕವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.