ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಗೆಳೆಯರ ಬಳಗ ಸ್ವ ಸಹಾಯ ಸಂಘದ ವಾರ್ಷಿಕ ಮಹಾ ಸಭೆ ನಡೆಯಿತು. ಜಿ.ಪಿ.ಮೋಹನ್, ಕೆ.ಬಿ.ಸಿದ್ದೇಗೌಡ, ಕೆ.ಸಿ.ನಾಗೇಶ್, ಎಂ.ಸಿ.ಸತೀಶ್‌ಕುಮಾರ್, ಎಸ್.ಬಿ.ರವಿಕುಮಾರ್, ಜಿ.ಆರ್.ರಾಮು ಇದ್ದರು. ----------- 
ಮಂಡ್ಯ

ಉತ್ತಮ ಸ್ಥಿತಿಯಲ್ಲಿ ಸ್ವ ಸಹಾಯ ಸಂಘ

ರವಿಕುಮಾರ್ ಪಿ. ಕೆ
ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮದ ಗೆಳೆಯರ ಬಳಗ ಸ್ವ ಸಹಾಯ ಸಂಘವು ಉತ್ತಮವಾಗಿ ನಡೆಯುತ್ತಿದೆ ಎಂದು ಸಂಘದ ಹಿರಿಯ ಸದಸ್ಯ ಕೆ.ಬಿ.ಸಿದ್ದೇಗೌಡ ತಿಳಿಸಿದರು.
ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಸ್ವ ಸಹಾಯ ಸಂಘಗಳ ಮಾದರಿಯಲ್ಲೇ ಗೆಳೆಯರ ಬಳಗದ ಸ್ವ ಸಹಾಯ ಸಂಘವು ಅತ್ಯುತ್ತಮವಾಗಿ ನಡೆಯುತ್ತಿದೆ. ಸಂಘದಲ್ಲಿ ಸುಮಾರು 13 ಸದಸ್ಯರಿದ್ದು ಎಲ್ಲರೂ ಕಾಲ ಕಾಲಕ್ಕೆ ಸಾಲ ತೆಗೆದುಕೊಂಡು ಮರು ಪಾವತಿ ಮಾಡುತ್ತಿರುವುದರಿಂದ ಸಂಘವು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಹಾಗೂ ಇತರ ಸಂಘಗಳಿಗೆ ನಮ್ಮ ಸಂಘ ಮಾದರಿಯಾಗಿದೆ ಎಂದರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಜಿ.ಪಿ.ಮೋಹನ್, ಸದಸ್ಯರಾದ ಕೆ.ಸಿ.ನಾಗೇಶ್, ಕೆ.ಸಿ.ನಾರಾಯಣ, ಎಂ.ಸಿ.ಸತೀಶ್‌ಕುಮಾರ್, ಎಸ್.ಬಿ.ರವಿಕುಮಾರ್, ಜಿ.ಆರ್.ರಾಮು, ಜಿ.ಎಲ್.ರಾಮಲಿಂಗ, ಎಸ್.ಆರ್.ಭರತ್‌ಗೌಡ, ಎಸ್.ಬಿ.ಬಸವರಾಜು, ಸುದರ್ಶನ, ಎಸ್.ಪಿ.ಮಹದೇವ, ಕೆ.ಬಿ.ಸಿದ್ದೇಗೌಡ. ಎಸ್.ಎಂ.ಮಲ್ಲೇಶ್ ಇದ್ದರು.