ಮಂಡ್ಯದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಆಯ್ಕೆಯಾದ ಸೈಕ್ಲಿಸ್ಟ್‌ಗಳನ್ನು ಅಭಿನಂದಿಸಲಾಯಿತು. 
ಮಂಡ್ಯ

ರಾಜ್ಯಮಟ್ಟಕ್ಕೆ ಸೈಕ್ಲಿಸ್ಟ್‌ಗಳ ಆಯ್ಕೆ: ನಗರದಲ್ಲಿ ಆಯೋಜಿಸಿದ್ದ ಆಯೋಜಿಸಿದ್ದ ಸ್ಪರ್ಧೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್‌ನಿಂದ ನಗರದಲ್ಲಿ ಜಿಲ್ಲಾಮಟ್ಟದ ಎಂಟಿಬಿ ಸೈಕ್ಲಿಂಗ್ ಆಯ್ಕೆ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಬಾಲಕರು ಮತ್ತು ಬಾಲಕಿಯರು ಭಾಗವಹಿಸಿದ್ದರು. ಅಂತೆಯೇ ಆ.7ರಿಂದ 9ರವರೆಗೆ ಗದಗ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ತಂಡವನ್ನು ಆಯ್ಕೆ ಮಾಡಲಾಯಿತು.

ಎಲೈಟ್ ಪುರುಷರ ವಿಭಾಗದ ಆರ್.ರವಿ, 23 ವರ್ಷದೊಳಗಿನ ವಿಭಾಗ ಎ.ತಿಮ್ಮಯ್ಯ ಕೊಡವ, 18 ವರ್ಷದೊಳಗಿನ ಬಾಲಕರ ವಿಭಾಗ ಎ.ಆರ್.ಗೋಪಿನಾಥ್, ಆರ್.ಪ್ರಜ್ವಲ್, 16 ವರ್ಷದೊಳಗಿನವರ ವಿಭಾಗ ಪರನಿತ್, ಮೋಹಿತ್, ಧ್ರುವ, ಜೀವನ್‌ಕುಮಾರ್, 14 ವರ್ಷದೊಳಗಿನ ವಿಭಾಗ ರಾಕೇಶ್, ಎನ್.ಆರ್.ಇಶಾನ್, ಸಮಥ್, ಅಲ್ಫಾಜ್ ಆಯ್ಕೆಯಾಗಿದ್ದಾರೆ. 16 ವರ್ಷದೊಳಗಿನ ಬಾಲಕಿಯರ ವಿಭಾಗದಿಂದ ನಿಸರ್ಗ, ಭಾಗ್ಯಶ್ರೀ, 14 ವರ್ಷದೊಳಗಿನವರ ವಿಭಾಗದಿಂದ ಅಪೇಕ್ಷಾ ಮತ್ತು ಫಾತಿಮಾ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಅಸೋಸಿಯೇಷನ್ ಅಧ್ಯಕ್ಷ ಟಿ.ವಿ.ನಾಗರಾಜ್, ಆರ್‌ಎಂ ಸೈಕಲ್ ವರ್ಲ್ಡ್‌ನ ಸುಧಾ ನಾಗರಾಜ್, ಪರಿಸರ ಇಂಜಿನಿಯರ್ ಎಂ.ಎನ್.ಪೃಥ್ವಿರಾಜ್, ಲಯನ್ಸ್ ಸಂಸ್ಥೆ ಮಾಜಿ ಪ್ರಾಂತಪಾಲ ಜಿ.ಎ.ರಮೇಶ್, ರಾಜಾನಂದ, ಡಾ.ಅರ್ಜುನ್, ಸುರೇಶ್ ಆಯ್ಕೆಯಾದವರನ್ನು ಅಭಿನಂದಿಸಿದರು.