ಬೆಳಗೊಳ ಹಾಲು ಉತ್ಪದಾಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ವಿ.ಯತೀಶ್ ಅವರನ್ನು ಸಂಘದ ಸದಸ್ಯರು ಅಭಿನಂದಿಸಿದರು.  
ಮಂಡ್ಯ

ಬೆಳಗೊಳ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

ಕೆ.ಆರ್.ಸಾಗರ: ಬೆಳಗೊಳ ಹಾಲು ಉತ್ಪದಾಕರ ಸಹಕಾರ ಸಂಘಕ್ಕೆ ಯತೀಶ್ ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷ ಬಾಬು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಈ ಸ್ಥಾನಕ್ಕೆ ಯತೀಶ್ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಡೇರಿ ಕಾರ್ಯದರ್ಶಿ ಗುರುರಾಜ್ ಘೋಷಿಸಿದರು.
ನೂತನ ಅಧ್ಯಕ್ಷ ಬಿ.ವಿ.ಯತೀಶ್ ಮಾತನಾಡಿ, ನಾನು ಎರಡನೇ ಬಾರಿಗೆ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಡೇರಿ ಆಭಿವೃದ್ಧಿ ಮತ್ತು ರೈತರ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಉಪಾಧ್ಯಕ್ಷೆ ಲತಾ ಸೇರಿದಂತೆ ಸಂಘದ ಸದಸ್ಯರು, ಗ್ರಾಮದ ಯಜಮಾನರು, ಮುಖಂಡರು ಇದ್ದರು.