ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಸರಸ್ವತಿ ಹಿರಿಯ ಪ್ರಾಥಮಿಕ ಪಾಠಶಾಲೆ ಮತ್ತು ತಾಯಮ್ಮ ಚನ್ನೇಗೌಡ ಪ್ರೌಢಶಾಲೆಯ 44ನೇ ವಾರ್ಷಿಕೋತ್ಸವ ಸಮಾರಂಭವನ್ನು ವಿಶ್ವ ಒಕ್ಕಲಿಗ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ರಾಧಿಕಾ, ಡಾ.ರಾಜೀವ್, ಎ.ಟಿ. ರಾಮೇಗೌಡ, ಬಿ.ಚೇತನ, ಕೃಷ್ಣ, ಕನ್ನಿಕಾ ಇದ್ದರು. 
ಮಂಡ್ಯ

ಗುಣಾತ್ಮಕ ಶಿಕ್ಷಣ ನೀಡುವುದು ಶ್ರೇಷ್ಠ ಸೇವೆ

ಎ. ಆರ್. ರಘುರಾಮ
ಮದ್ದೂರು : ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಶ್ರೇಷ್ಠವಾದ ಸೇವೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.
ಬೆಸಗರಹಳ್ಳಿಯ ಕೆಂಪೂಗೌಡ ಚನ್ನೇಗೌಡ ರಾಷ್ಟ್ರೀಯ ವಿದ್ಯಾಲಯದ ಸರಸ್ವತಿ ಹಿರಿಯ ಪ್ರಾಥಮಿಕ ಪಾಠಶಾಲೆ, ಮತ್ತು ತಾಯಮ್ಮ ಚನ್ನೇಗೌಡ ಪ್ರೌಢಶಾಲೆಯ 44ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ಮಹತ್ವ ಅರಿತಿದ್ದ ಮಾಜಿ ಶಾಸಕ ದಿ.ಅಪ್ಪಾಜಿಗೌಡ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಶಿಕ್ಷಣ ತಜ್ಞರ ಸಲಹೆ ಪಡೆದು ಬೆಸಗರಹಳ್ಳಿಯಲ್ಲಿ ವಿದ್ಯಾಸಂಸ್ಥೆ ತೆರೆದರು. ಈ ಸೇವೆಯೇ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಯಿತು ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ರಾಜೀವ್ ಅವರು, ಸ್ವಂತ ದುಡಿಮೆ ಹಣದಲ್ಲಿ ಮಕ್ಕಳಿಗೆ ಶಾಲಾ ಬಸ್ ಕೊಡಿಸಿದ್ದಾರೆ. ಸಂಸ್ಥೆಯ ಏಳಿಗೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೆಲ್ಲವೂ ಹೆಮ್ಮೆಯ ವಿಚಾರ ಎಂದರು.
ನವೋದಯ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ ಮಾತನಾಡಿ, ವಿದ್ಯಾರ್ಥಿ ಗಳು ವಿದ್ಯಾರ್ಜನೆಯೊಂದಿಗೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಪಾಲಕರಿಗೆ, ಗುರು ಹಿರಿಯರಿಗೆ ಗೌರವವನ್ನು ಕೊಡಬೇಕು. ಉತ್ತಮ ಶಿಕ್ಷಣ ಪಡೆದು ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿಗಳು, ಗ್ರಾಮಸ್ಥರು, ಪಾಲಕರು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಪಾದಪೂಜೆ ಮಾಡಿದರು. ವಾರ್ಷಿಕೋತ್ಸವದಲ್ಲಿ 30 ನೃತ್ಯ, 3 ಕಿರು ನಾಟಕಗಳು ಆಕರ್ಷಿಸಿದವು. ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಇಲಿಯಾಜ್ ಅವರು ಉತ್ತಮ ನೃತ್ಯ ಮಾಡಿದ ಮಕ್ಕಳಿಗೆ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು. ಹೆಚ್ಚು ಅಂಕಗಳಿಸಿದ 10ನೇ ತರಗತಿ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಎ.ಎನ್. ಶ್ರೀಧರ , ಗ್ರಾಪಂ ಅಧ್ಯಕ್ಷೆ ರಾಧಿಕಾ ಪ್ರಸಾದ್, ಸಂಸ್ಥೆಯ ಅಧ್ಯಕ್ಷ ಡಾ.ರಾಜೀವ್, ಜಂಟಿ ಕಾರ್ಯದರ್ಶಿ ಎ. ಟಿ. ರಾಮೇಗೌಡ, ಕಾರ್ಯದರ್ಶಿಗಳಾದ, ಬಿ.ಚೇತನ್, ಕೃಷ್ಣ, ಮಾಲತಿಚೇತನ್, ನಿರ್ದೇಶಕರಾದ ಪ್ರಕಾಶ್, ಮರಳಿಗಸ್ವಾಮಿ, ಕೃಷ್ಣ, ವಕೀಲರಾದ ಬಿ.ಎಂ.ಸತ್ಯ, ಕೆ.ಎಸ್.ರಘು, ಸಿಆರ್‌ಪಿ ಸತೀಶ್ ಇತರರಿದ್ದರು.