ಹಸಿರು ಅಭಿಯಾನ ಘೋಷಣೆಯಡಿ ತಾಲೂಕಿನ ಕೆಸ್ತೂರು ಗ್ರಾಮದ ಇಂದಿರಾಗಾಂಧಿ ವಸತಿ ಶಾಲೆ ಮತ್ತು ಪೈ ಫೌಂಡೇಷನ್‌ನಿಂದ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ಕೆ ಫೌಂಡೇಷನ್ ಅಧ್ಯಕ್ಷ ರಾಜ್‌ಕುಮಾರ್ ಪೈ ಚಾಲನೆ ನೀಡಿದರು. ಸುರೇಶ್, ಅನುಪಮಾ, ಸುಜಾತಾ ಇದ್ದರು. 
ಮಂಡ್ಯ

ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಲೋಕೇಶ್ ಮನು. ಡಿ
ಮದ್ದೂರು: ಭವಿಷ್ಯದ ಪ್ರಜೆಗಳಿಗೆ ಉತ್ತಮ ಜೀವನ, ಆರೋಗ್ಯಕ್ಕಾಗಿ ಪರಿಸರ ಸಂರಕ್ಷಣೆ ಬಹುಮುಖ್ಯ ಎಂದು ಪೈ ಫೌಂಡೇಷನ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ ಅಭಿಪ್ರಾಯಪಟ್ಟರು.
ಹಸಿರು ಅಭಿಯಾನ ಘೋಷಣೆಯಡಿ ತಾಲೂಕಿನ ಕೆಸ್ತೂರು ಗ್ರಾಮದ ಇಂದಿರಾಗಾಂಧಿ ವಸತಿಶಾಲೆ ಮತ್ತು ಪೈ ಫೌಂಡೇಷನ್‌ನಿಂದ ಸೋಮವಾರ ಆಯೋಜಿಸಿದ್ದ ವಿವಿಧ ಜಾತಿಯ 5,550ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪೈ ಸಂಸ್ಥೆ ವತಿಯಿಂದ ವಿವಿಧೆಡೆ ಒಂದು ಕೋಟಿ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಇದರ ಭಾಗವಾಗಿ ಇಂದಿರಾ ಗಾಂಧಿ ವಸತಿಶಾಲೆಯಲ್ಲಿ ವಿವಿಧ ಪ್ರಭೇದದ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನೆಡುವ ಸಸಿಗಳನ್ನು ಸಂರಕ್ಷಿಸಿ ಪೋಷಿಸುವ ಹೊಣೆಗಾರಿಕೆಯನ್ನು ಸಂಸ್ಥೆ ನಿರ್ವಹಿಸುವುದಾಗಿ ಮತ್ತು ಸಸಿಗಳಿಗೆ ನಿರುಣಿಸಲು ಅಗತ್ಯವಿರುವ ಕೊಳವೆಬಾವಿ ಕೊರೆಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಸುರೇಶ್, ಸಿಬ್ಬಂದಿ ಅನುಪಮಾ, ಸುಜಾತಾ, ಪೈ ಫೌಂಢಷನ್‌ನ ಪದಾಧಿಕಾರಿಗಳಾದ ಮೀನಾ ರಾಜ್‌ಕುಮಾರ್, ಗುರುಪ್ರಸಾದ್ ಪೈ, ಪುಷ್ಪಾ ಪೈ, ಜಯಶ್ರೀ, ರಾಹುಲ್ ಆರ್.ಪೈ, ರೋಹಿತ್ ಆರ್.ಪೈ, ನಿರ್ಮಲಾ ಪ್ರಭು ಸಿಬ್ಬಂದಿ ಇದ್ದರು.