ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಶ್ರೀ ಸಮರ್ಥ ಸದ್ಗುರು ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಸಾಯಿಬಾಬಾರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿರುವುದು.  
ಮಂಡ್ಯ

ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವ

ಪ್ರಜ್ವಲ್.ಎನ್
ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಶ್ರೀ ಸಮರ್ಥ ಸದ್ಗುರು ಸಾಯಿಬಾಬಾರ 21ನೇ ವರ್ಷದ ಪಲ್ಲಕ್ಕಿ ಮಹೋತ್ಸವ ಭಾನುವಾರ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮಹೋತ್ಸವದ ಅಂಗವಾಗಿ ಶನಿವಾರ ಬೆಳಗ್ಗೆಯಿಂದಲೇ ಸಾಯಿಬಾಬಾ ದೇವಾಲಯದಲ್ಲಿ ಹೋಮ ಹವನ ಪೂಜಾ ವಿಧಿ ವಿಧಾನಗಳು ಜರುಗಿದವು. ವಳಗೆರೆಹಳ್ಳಿ, ಸೊಳ್ಳೆಪುರ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಸಾಯಿಬಾಬಾರ ದಿವ್ಯ ದರ್ಶನ ಪಡೆದರು.