ಶ್ರೀರಂಗಪಟ್ಟಣದ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಪದಕಗಳಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಭಾನುಪ್ರಿಯ, ತರಬೇತುದಾರರಾದ ಗೋಪಿ ಮತ್ತು ಹೇಮಂತ್ ಇದ್ದರು. 
ಮಂಡ್ಯ

ಕರಾಟೆಯಲ್ಲಿ ರಿವರ್ ವ್ಯಾಲಿ ಸಂಸ್ಥೆ ವಿದ್ಯಾರ್ಥಿಗಳು ಸಾಧನೆ

ನಾಗೇಶ ಎಸ್

ಶ್ರೀರಂಗಪಟ್ಟಣ:

ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈಧಿದ್ದಾರೆ.

ಮಂಡ್ಯದ ಕಲ್ಲಹಳ್ಳಿಯ ಕಾವೇರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಕರಾಟೆ ಉತ್ಸವ ಪ್ರಯುಕ್ತ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ರಾಜ್ಯದ ವಿವಿಧೆಡೆಯಿಂದ 1 ಸಾವಿರ ಕ್ರೀಡಾಪಟುಗಳು ಭಾಗವಹಿಸಿದ್ದರು. ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ನೀರಿಕ್ಷಾ ಗ್ರೀನ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಹಳದಿ ಬೆಲ್ಟ್ ವಿಭಾಗದಲ್ಲಿ 4ನೇ ತರಗತಿಯ ಹನೀಶ್ ಪ್ರಥಮ ಸ್ಥಾನ, 4ನೇ ತರಗತಿಯ ಚಿಗುರು ತೃತೀಯಾ, ಯಾನ್ವೀ ಮತ್ತು ಯುಗನ್ ತೃತೀಯ ಸ್ಥಾನ ಹಾಗೂ 6ನೇ ತರಗತಿಯ ಸಮರ್ಥ ಹಳದಿ ಬೆಲ್ಟ್ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ತರಬೇತುದಾರರಾದ ಗೋಪಿ ಮತ್ತು ಹೇಮಂತ್ ಅವರ ನೇತೃತ್ವದಲ್ಲಿ ಟ್ರೋಫಿ, ಪದಕ ಮತ್ತು ಪ್ರಮಾಣ ಪತ್ರಗಳಿಸಿ ಉತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಆದರ್ಶ ಮತ್ತು ಮ್ಯಾನೆಜಿಂಗ್ ಟ್ರಸ್ಟಿ ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯ ಅಭಿನಂದಿಸಿದ್ದಾರೆ.