ಮಳವಳ್ಳಿ ತಾಲೂಕಿನ ಮಿಕ್ಕೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಾಮಲಿಂಗೇಗೌಡ, ಉಪಾಧ್ಯಕ್ಷೆ ನಾಗಮ್ಮ ಅವರನ್ನು ಅಭಿನಂದಿಸಲಾಯಿತು. ನಿರ್ದೇಶಕರಾದ ಚಿಕ್ಕಲಿಂಗಯ್ಯ, ಉಮೇಶ್, ಪುಟ್ಟಸ್ವಾಮಿ, ಬಸವರಾಜು, ವಿ.ಎನ್.ರಾಜಶೇಕರ್ , ಕೆ.ಎಸ್.ರಾಜಣ್ಣ, ಜೆ.ಟಿ.ಪ್ರಸನ್ನ ಕುಮಾರ್, ಕಲ್ಕುಣಿ ದೇವರಾಜು, ಮಹದೇವು, ಎಲ್.ಬಸವರಾಜು, ಡಿ.ಬಿ.ರುದ್ರ, ಪಿ.ಶಿವಕುಮಾರ್, ಎಂ.ಮಂಜು, ದೊಡ್ಡಣ್ಣ, ರಾಜು, ಮಹದೇವ, ಲಿಂಗರಾಜು, ಅಂಗಡಿ ಮಹದೇವ, ನಾಗಣ್ಣ ಇದ್ದರು.  
ಮಂಡ್ಯ

ಮಿಕ್ಕೆರೆ ಕೃಷಿ ಸಹಕಾರ ಸಂಘಕ್ಕೆ ರಾಮಲಿಂಗೇಗೌಡ ಅಧ್ಯಕ್ಷ

ಪ್ರಮುಖ ಮುಖ್ಯಾಂಶಗಳು

  • ಉಪಾಧ್ಯಕ್ಷರಾಗಿ ನಾಗಮ್ಮ ಅವಿರೋಧ ಆಯ್ಕೆ
ಮಳವಳ್ಳಿ: ತಾಲೂಕಿನ ಮಿಕ್ಕೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮಲಿಂಗೇಗೌಡ, ಉಪಾಧ್ಯಕ್ಷರಾಗಿ ನಾಗಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಇತ್ತೀಚೆಗೆ ನಡೆದಿದ್ದು, ಸಂಘದ ಷೇರುದಾರ ಮುಖಂಡರು ಮಾತುಕತೆ ಮೂಲಕ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಪದಾಧಿಕಾರಿಗಳ ಆಯ್ಕೆಗೆ ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಮಲಿಂಗೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ನಾಗಮ್ಮ ತಲಾ ಒಬ್ಬರೆ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಚುನವಾಣಾಧಿಕಾರಿಯಾಗಿ ಸಹಕಾರ ಇಲಾಖೆಯ ಎನ್.ಎಲ್.ರವಿ ಕಾರ್ಯ ನಿರ್ವಹಿಸಿದ್ದರು.
ನೂತನ ಅಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ಷೇರುದಾರರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ನಿರ್ದೇಶಕರಾದ ಚಿಕ್ಕಲಿಂಗಯ್ಯ, ಉಮೇಶ್, ಪುಟ್ಟಸ್ವಾಮಿ, ಬಸವರಾಜು, ವಿ.ಎನ್.ರಾಜಶೇಕರ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಕೆ.ಎಸ್.ರಾಜಣ್ಣ, ಸಂಘದ ಸಿಇಒ ಜೆ.ಟಿ. ಪ್ರಸನ್ನ ಕುಮಾರ್, ಗುಮಾಸ್ತ ಎಂ.ಸಿ.ಪ್ರಕಾಶ್, ಮುಖಂಡರಾದ ಕಲ್ಕುಣಿ ದೇವರಾಜು, ಮಹದೇವು, ಎಲ್.ಬಸವರಾಜು, ಡಿ.ಬಿ.ರುದ್ರ, ಪಿ.ಶಿವಕುಮಾರ್, ಎಂ.ಮಂಜು, ದೊಡ್ಡಣ್ಣ, ರಾಜು, ಮಹದೇವ, ಲಿಂಗರಾಜು, ಅಂಗಡಿ ಮಹದೇವ, ನಾಗಣ್ಣ ಇತರರು ಇದ್ದರು.