ತಾಲೂಕಿನ ವಿದ್ಯಾ ಇಲಾಖಾ ನೌಕರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದ ಶಿಕ್ಷಕ ಎಚ್.ಟಿ.ರಾಜಶೇಖರ್ ಅವರಿಗೆ ಸಂಘದ ನಿರ್ದೇಶಕರು ಮತ್ತು ಸದಸ್ಯರು ಅಭಿನಂದಿಸಿದರು.
ಶ್ರೀರಂಗಪಟ್ಟಣ: ತಾಲೂಕಿನ ವಿದ್ಯಾ ಇಲಾಖಾ ನೌಕರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಿಕ್ಷಕ ಎಚ್.ಟಿ.ರಾಜಶೇಖರ್ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದಲ್ಲಿ ಸಂಘದ ಆವರಣದಲ್ಲಿ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಎಚ್.ಟಿ.ರಾಜಶೇಖರ್, ಎಚ್.ರಾಘವೇಂದ್ರ, ಎನ್.ಎನ್.ಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಕಣದಲ್ಲಿ ಎಚ್.ಟಿ.ರಾಜಶೇಖರ್ ಹೊರತುಪಡಿಸಿ ಉಳಿದವರು ನಾಮಪತ್ರ ಹಿಂಪಡೆದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣೆಯಲ್ಲಿ ಸಹಕಾರ ಸಂಘದ ನಿಬಂಧಕ ಪ್ರಸಾದ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಚುನಾವಣಾ ಸೂಚಕರಾಗಿ ಎನ್.ಎನ್ ಪ್ರಕಾಶ್, ಅನುಮೋದಕರಾಗಿ ಡಿ.ರಮೇಶ್, ಸಿದ್ದಲಿಂಗು ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದರು. ಈ ವೇಳೆ ಸಂಘದ ನಿರ್ದೇಶಕರಾದ ಎಚ್.ಸಿ.ಚಂದ್ರು, ಎಸ್. ಸಿ.ರಮೇಶ್, ಜಿ.ಮಂಜುನಾಥ್, ಸುಮತಿ, ರವಿಕುಮಾರ್ ಇತರರು ಇದ್ದರು.