ಮದ್ದೂರಲ್ಲಿ ರಾಘವೇಂದ್ರ ಗುರುಸಾರ್ವಭೌಮರ ದಿವ್ಯ ರಥೋತ್ಸವ ಅದ್ದೂರಿಯಾಗಿ ನೆರವೇರಿತು. 
ಮಂಡ್ಯ

ವಿಜೃಂಭಣೆಯ ರಾಘವೇಂದ್ರ ಗುರುಸಾರ್ವಭೌಮರ ವರ್ಧಂತಿ

ಪ್ರಮುಖ ಮುಖ್ಯಾಂಶಗಳು

  • ನಗರದ ಕೋಟೆಬೀದಿ
  • ಶ್ರೀ ಗುರುರಾಘವೇಂದ್ರ ಮಂದಿರ
  • ಶ್ರೀರಾಘವೇಂದ್ರ ಗುರುಸಾರ್ವಭೌಮರ ಸೇವಾ ಟ್ರಸ್ಟ್
ಮದ್ದೂರು: ನಗರದ ಕೋಟೆಬೀದಿಯಲ್ಲಿರುವ ಶ್ರೀ ಗುರುರಾಘವೇಂದ್ರ ಮಂದಿರದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ಸೇವಾ ಟ್ರಸ್ಟ್ ವತಿಯಿಂದ ರಾಘವೇಂದ್ರ ಗುರುಸಾರ್ವಭೌಮರ 431ನೇ ವರ್ಧಂತಿ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ವರ್ಧಂತಿ ಅಂಗವಾಗಿ ಮಂದಿರದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮುಂಜಾನೆ ಸತ್ಯನಾರಾಯಣಸ್ವಾಮಿಗೆ ಅಭಿಷೇಕ, ಬೆಳ್ಳಿ ಕವಚ ಸಮರ್ಪಣೆ, ಗುರುಗಳ ಬೃಂದಾವನಕ್ಕೆ ಅಭಿಷೇಕ ಬಳಿಕ ಕೋಟೆ ಬೀದಿಯಲ್ಲಿ ಶ್ರೀಗಳ ದಿವ್ಯ ರಥೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥೋತ್ಸವದ ಬಳಿಕ ಮಹಾಮಂಗಳಾರತಿ, ಸಹಸ್ರಾರು ಭಕ್ತರಿಗೆ ತೀರ್ಥ ಪ್ರಸಾದ, ಪ್ರಸಾದ ವಿತರಣೆ ಮಾಡಲಾಯಿತು.
ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಪ್ರಸಾದ್ ಮಾತನಾಡಿ, ಶ್ರೀ ರಾಘವೇಂದ್ರ ಗುರುಸಾರ್ವಭೌಮರ 431ನೇ ವರ್ಧಂತಿ ಭಕ್ತರು, ದಾನಿಗಳು, ಟ್ರಸ್ಟ್ ಪದಾಧಿಕಾರಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು ಎಂದು ಹರ್ಷ ವ್ಯಕ್ತಪಡಿಸಿದರು.